ಆಸ್ಪತ್ರೆಯ ಟಾಯ್ಲೆಟ್‌ ಫ್ಲಷ್‌ನಲ್ಲಿ ಶಿಶು: ಕೊನೆಗೂ ಸಿಕ್ಕಿಬಿದ್ದ ಕಿರಾತಕಿ! ಕರುಳಕುಡಿಯನ್ನೇ ಹೊಸಕಿ ಹಾಕಿದ್ದೇಕೆ ಈ ಅಮ್ಮ?

baby
Published on

ತಂಜಾವೂರು (ತಮಿಳುನಾಡು): ಶೌಚಗೃಹದ ಫ್ಲಷ್‌ನಲ್ಲಿ ನವಜಾತ ಶಿಶುವಿನ ಮೃತದೇಹವೊಂದು ಸಿಕ್ಕಿರುವ ಘಟನೆ ತಮಿಳುನಾಡಿನ ತಂಜಾವೂರಿನ ಆಸ್ಪತ್ರೆಯೊಂದರಲ್ಲಿ ನಡೆದಿತ್ತು.

ಇಲ್ಲಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ (ಟಿಎಂಸಿಹೆಚ್) ಫ್ಲಷ್‌ ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ದೂರು ಬಂದಿತ್ತು. ಇದನ್ನು ಆಧರಿಸಿ ರಿಪೇರಿ ಮಾಡಲು ಹೋಗಿದ್ದಾರೆ ಸಿಬ್ಬಂದಿ. ಆಗ ಫ್ಲಷ್‌ನ ಟ್ಯಾಂಕ್‌ ಬಾಗಿಲು ತೆರೆದಾಗ ಅವರಿಗೆ ಶಾಕ್‌ ಆಗಿದೆ. ಏಕೆಂದರೆ ಅದರಲ್ಲಿ ಆಗತಾನೇ ಹುಟ್ಟಿದ ಮಗುವಿನ ಶವವೊಂದು ಸಿಕ್ಕಿತ್ತು.

ತೀವ್ರ ನಿಗಾ ಘಟಕದ ಶೌಚಗೃಹದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿಯಿಂದ ಈ ಕೃತ್ಯ ಎಸಗಿದಾಕೆ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಮಗುವನ್ನು ಕೊಂದದ್ದು ಮತ್ಯಾರೂ ಅಲ್ಲ, ಖುದ್ದು ಹೆತ್ತಾಕೆಯೇ! 23 ವರ್ಷದ ಈಕೆ ಹೆಸರು ಪ್ರಿಯದರ್ಶಿನಿ. ಮಗು ಹುಟ್ಟುತ್ತಿದ್ದಂತೆಯೇ ಅದನ್ನು ಸಾಯಿಸಿದ್ದಾಳೆ. ಅದರ ಶವವನ್ನು ಎಲ್ಲಿ ಎಸೆಯಬೇಕು ಎಂದು ತಿಳಿಯದಾದಾಗ ಹೋಗಿ ಟಾಯ್ಲೆಟ್‌ನ ಫ್ಲಷ್‌ನಲ್ಲಿ ಹಾಕಿದ್ದಾಳೆ! ಸಿಸಿಟಿವಿಯಿಂದ ಅಸಲಿಯತ್ತು ಬದಲಾಗಿದೆ.

ಅಷ್ಟಕ್ಕೂ ಇಂಥದ್ದೊಂದು ನೀಚ ಕಾರ್ಯಕ್ಕೆ ಈಕೆ ಮುಂದಾಗಿದ್ದು ಏಕೆಂದರೆ ಇವಳು ಅವಿವಾಹಿತೆ. ಅಕ್ರಮ ಸಂಬಂಧ ಹೊಂದಿದ್ದ ಈಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ತನ್ನ ಅಕ್ರಮ ಸಂಬಂಧದ ಗುಟ್ಟು ಬಯಲಾಗುವ ಉದ್ದೇಶದಿಂದ ಈ ಕೃತ್ಯ ಮಾಡಿದ್ದಾಳೆ.

ಆಕೆಯ ವಿರುದ್ಧ ಸೆಕ್ಷನ್​​ 318 ಸೇರಿದಂತೆ ಅನೇಕ ಕಲಂಗಳ ಅಡಿ ದೂರು ದಾಖಲು ಮಾಡಿಕೊಂಡಿದ್ದಾರೆ. ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net