ಕರೊನಾ ರೂಪಾಂತರಿಯಿಂದ ರಾಜ್ಯದಲ್ಲಿ ಸದ್ಯ ಲಾಕ್‌ಡೌನ್‌ ಆಗತ್ತಾ? ಸಚಿವ‌ ಸುಧಾಕರ್ ಏನು ಹೇಳಿದ್ದಾರೆ ನೋಡಿ...

ಕರೊನಾ ರೂಪಾಂತರಿಯಿಂದ ರಾಜ್ಯದಲ್ಲಿ ಲಾಕ್‌ಡೌನ್‌ ಆಗತ್ತಾ? ಸಚಿವ‌ ಸುಧಾಕರ್ ಹೇಳಿದ್ದೇನು#Corona #Lockdown #Sudhakar - youtube
Published on

ಬೆಂಗಳೂರು: ಕರೊನಾ ವೈರಾಣು ಹೊಸ ರೂಪಾಂತರಿ ಒಮಿಕ್ರಾನ್ ತಳಿ ಹೇಗೆ ವ್ಯವಹಸುರಿತ್ತದೆ ಎಂದು ಗೊತ್ತಿಲ್ಲ. ಲಾಕ್ ಡೌನ್ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಜನರಲ್ಲಿ ಗಾಬರಿ, ಗೊಂದಲ ಸೃಷ್ಟಿಸುವುದು ಬೇಡವೆಂದು ಸಮೂಹ ಮಾಧ್ಯಮಗಳಿಗೆ ಮನವಿ ಮಾಡಿಕೊಂಡರು.

ಸದಾಶಿವ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಅಲೆ ಅಪ್ಪಳಿಸಿದ ಕಾಲಕ್ಕೆ ವಿಧಿಸಿದ ಲಾಕ್ ಡೌನ್ ನಿಂದ ಜನರು ಸಾಕಷ್ಟು ನೊಂದು ಬೆಂದಿದ್ದಾರೆ. ಜೀವ ಹಾನಿಗಳಾಗಿವೆ, ಉದ್ಯೋಗ- ಆರ್ಥಿಕ ನಷ್ಟಗಳಾಗಿವೆ. ತೀರಾ ಕುಸಿದು ಹೋಗಿರುವ ಜನಜೀವನದ ಮೇಲೆ ಲಾಕ್ ಡೌನ್‌ ಹೇರುವ ವಿಚಾರವನ್ನೇ ಸರ್ಕಾರ ಮಾಡಿಲ್ಲ ಎಂದು ಹೇಳಿದರು.

ಸಂಜೆ ಮಾಹಿತಿ: ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿರುವ 63 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ವೈರಾಣು ಡೆಲ್ಟಾ ಪ್ಲಸ್ ಗಿಂತ ಸ್ವಲ್ಪ ವಿಭಿನ್ನವಾಗಿದೆ. ಐಸಿಎಂಆರ್ ಹಾಗೂ ಕೇಂದ್ರದ ಆರೋಗ್ಯ ಇಲಾಖೆ ಜತೆಗೆ ನಿರಂತರ ಸಂಪರ್ಕದಲ್ಲಿದ್ಸು, ಸಂಜೆ ವೇಳೆಗೆ ಖಚಿತ ಮಾಹಿತಿ ಲಭ್ಯವಾಗಲಿದೆ.

ತೀವ್ರತೆಯಿಲ್ಲ: ದಕ್ಷಿಣ ಆಫ್ರಿಕಾದಲ್ಲಿರುವ ಸಹಪಾಠಿ ವೈದ್ಯರು‌ ನೀಡಿದ ಮಾಹಿತಿ ಪ್ರಕಾರ ಒಮಿಕ್ರಾನ್ ಪ್ರಭೇದವು ವೇಗವಾಗಿ ಹರಡುತ್ತದೆಯಾದರೂ ಡೆಲ್ಟಾ ಪ್ಲಸ್ ನಷ್ಟು ತೀವ್ರತೆಯಿಲ್ಲ. ವಾಂತಿ, ಸುಸ್ತು, ಪಲ್ಸ್ ರೇಟ್ ಹೆಚ್ಚಳ ಈ ಸೋಂಕಿನ ಲಕ್ಷಣಗಳು ಎಂದು ಸುಧಾಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net