ಶಾಸಕ ನೇಗಿ ವಿರುದ್ಧ ರೇಪ್​ ಕೇಸ್​: ನನ್ನ ಮಗಳ ತಂದೆ ಇವರೇ ಎಂದ ಮಹಿಳೆ- ಎಫ್​ಐಆರ್​ ದಾಖಲು

negi
Published on

ಡೆಹ್ರಾಡೂನ್‌: ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್‌ ನೇಗಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ದೂರು ದಾಖಲು ಮಾಡಿದ್ದಾರೆ.

ಶಾಸಕ ಮಹೇಶ್‌ ನೇಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಶಾಸಕರೇ ನನ್ನ ಮಗಳ ತಂದೆ. ಬೇಕಾದ್ದಲ್ಲಿ ಡಿಎನ್‌ಎ ಪರೀಕ್ಷೆಗೂ ತಾನು ಸಿದ್ಧ ಎಂದು ಮಹಿಳೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೇಗಿ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.

ನೇಗಿ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ, ಮಾತ್ರವಲ್ಲದೇ ವಿಷಯವನ್ನು ತಿಳಿಸದಂತೆ ಬೆದರಿಕೆ ಹಾಕಿದ್ದಾರೆ. ಅವರ ಅತ್ಯಾಚಾರದಿಂದಾಗಿಯೇ ನನಗೆ ಮಗಳ ಜನಿಸಿದ್ದಾಳೆ. ಆಕೆಯ ಡಿಎನ್​ಎ ಪರೀಕ್ಷೆ ಮಾಡಿದರೆ ಸತ್ಯಾಂಶ ಗೊತ್ತಾಗುತ್ತದೆ. ನಾನು ಪರೀಕ್ಷೆಗೆ ಸಿದ್ಧ ಎಂದು ಮಹಿಳೆ ಹೇಳಿದ್ದಾರೆ.

ನೇಗಿ ಅವರ ಪತ್ನಿ ರಿತಾ ಕೂಡ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಶಾಸಕ ಮಹೇಶ್‌ ನೇಗಿ ವಿರುದ್ಧ ಅತ್ಯಾಚಾರ ಮತ್ತು ಅವರ ಪತ್ನಿ ರಿತಾ ನೇಗಿಯ ವಿರುದ್ಧ ಬೆದರಿಕೆ ಕೇಸ್​ ದಾಖಲು ಮಾಡಿಕೊಳ್ಳಲಾಗಿದೆ.

ನೆಹರೂ ಕಾಲೋನಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡೆಹ್ರಾಡೂನ್‌ ವರಿಷ್ಠಾಧಿಕಾರಿ ಶ್ವೇತ ಚೌಬೆ ತಿಳಿಸಿದ್ದಾರೆ.

ಆದರೆ ಈ ಆರೋಪವನ್ನು ಮಹೇಶ್‌ ನೇಗಿ ತಳ್ಳಿ ಹಾಕಿದ್ದಾರೆ, 'ಇದು ನನ್ನ ಹೆಸರಿಗೆ ಕಳಂಕ ತರಲು ನಡೆದಿರುವ ಪಿತೂರಿ. ಇದರಲ್ಲಿ ಕಾಂಗ್ರೆಸ್‌ ನಾಯಕರ ಕೈವಾಡವಿದೆ. ನಾನು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ' ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net