ಮೈಸೂರು ಗ್ಯಾಂಗ್‌ರೇಪ್‌ ಕೇಸ್‌: ಅಜ್ಞಾತ ಸ್ಥಳಕ್ಕೆ ಆರೋಪಿಗಳು- ವೈದ್ಯಕೀಯ ಪರೀಕ್ಷೆಗೆ ವಿಶೇಷ ತಂಡ

mysore case
Published on

ಮೈಸೂರು: ಇಡೀ ರಾಜ್ಯವನ್ನೇ ತಲ್ಲಣಗೊಳಿಸಿರುವ ಮೈಸೂರಿನ ಎಂಬಿಎ ವಿದ್ಯಾರ್ಥಿನಿಯ ಗ್ಯಾಂಗ್‌ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕಿಬಿದ್ದಿರುವ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ಮೈಸೂರಿನ ಅಜ್ಞಾತ ಸ್ಥಳಕ್ಕೆ ಆರೋಪಿಗಳನ್ನು ಶಿಫ್ಟ್‌ ಮಾಡಲಾಗಿದ್ದು, ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ. ಆರೋಪಿಗಳ ಆರೋಗ್ಯ ತಪಾಸಣೆಗಾಗಿ ಮೈಸೂರಿಗೆ ವಿಷೇಶ ತಂಡ ಆಗಮಿಸಿದೆ.

ಬಂಧಿತ ಆರೋಪಿಗಳ ಸ್ಯಾಂಪಲ್‌ಗಳನ್ನು ವಿಶೇಷ ತಜ್ಞರ ತಂಡ ಪಡೆಯಲಿದೆ. ಈ ಹಿನ್ನೆಲೆಯಲ್ಲಿ ಲ್ಯಾಟ್ ಟೆಕ್ನಿಷಿಯನ್ ಹಾಗೂ ತಜ್ಞರ ತಂಡ ಮೈಸೂರಿಗೆ ಆಗಮಿಸಲಿದೆ. ಅಜ್ಞಾತ ಸ್ಥಳದಲ್ಲಿ ಆರೋಪಿಗಳ ಸ್ಯಾಂಪಲ್‌ ಪಡೆದುಕೊಂಡು ನಂತರ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಯಲಿದೆ.

ಸ್ಯಾಂಪಲ್ಸ್ ಪಡೆದುಕೊಳ್ಳುವ ಕಾರ್ಯ ಶುರುವಾಗಿದೆ. ಆದರೆ ಆರೋಪಿಗಳ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಅಜ್ಞಾತ ಸ್ಥಳಕ್ಕೆ ಕರೆಯೊಯ್ಯಲಾಗಿದೆ. ಸಂಪೂರ್ಣ ವರದಿ ಸಿಗುವವರೆಗೂ ಮೈಸೂರಿನಲ್ಲಿಯೇ ತಜ್ಞರ ತಂಡ ಬೀಡುಬಿಟ್ಟಿರಲಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net