More

    3 ಎಕರೆಗಾಗಿ ನಾಲ್ವರು ಸಹೋದರರ ಭೀಕರ ಹತ್ಯೆ: ನೋಡಲಾಗುತ್ತಿಲ್ಲ ಹೆತ್ತಾಕೆಯ ಕಣ್ಣೀರು- 9 ಮಂದಿ ಅರೆಸ್ಟ್‌

    ಬಾಗಲಕೋಟೆ: ಸುಮಾರಿ 3 ಎಕರೆ 21 ಗುಂಟೆ ಜಮೀನಿನ ವಿವಾದ ನಾಲ್ವರು ಸಹೋದರರ ಬರ್ಬರ ಹತ್ಯೆಯಲ್ಲಿ ಕೊನೆಗೊಂಡ ಭಯಾನಕ ಘಟನೆಗೆ ಬಾಗಲಕೋಟೆ ಜಿಲ್ಲೆಯ ಸಾಕ್ಷಿಯಾಗಿದೆ. ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮದ ಹೊರವಲಯದ ತೋಟದಲ್ಲಿ ಈ ಭಯಾನಕ ಘಟನೆ ಶನಿವಾರ ರಾತ್ರಿ ನಡೆದಿದೆ.

    ಎರಡು ಕುಟುಂಬಗಳ ನಡುವಿನ ಜಮೀನು ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿದೆ.

    ಮುದರಡ್ಡಿ(ಉದಗಟ್ಟಿ) ಕುಟುಂಬದ ಸಹೋದರರಾದ ಹನುಮಂತ ಮಹಾದೇವ ಮುದರಡ್ಡಿ(45), ಮಲ್ಲಪ್ಪ(42) ಬಸಪ್ಪ(37) ಹಾಗೂ ಈಶ್ವರ(35)ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಜಮಖಂಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮುದರಡ್ಡಿ ಕುಟುಂಬದವರು ಗ್ರಾಮದ ಪುಟಾಣಿ ಕುಟುಂಬದವರಿಂದ ಜಮೀನು ಖರೀದಿ ಮಾಡಿದ್ದು, ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವಿವಾದ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ. ಇದೇ ವಿವಾದ ಸ್ಫೋಟಗೊಂಡು ನಾಲ್ವರ ಕೊಲೆ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

    ಪುಟಾಣಿ ಕುಟುಂಬದವರಿಂದ ಖರೀದಿಸಿದ್ದ 3ಎಕರೆ 21 ಗುಂಟೆ ಜಮೀನಿನಲ್ಲಿ 21 ಗುಂಟೆ ಜಾಗವನ್ನು ಬಿಟ್ಟು ಕೊಡುವುದಾಗಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮುದರಡ್ಡಿ ಕುಟುಂಬದವರು ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಆದರೆ ಆ ಜಮೀನು ಬಿಟ್ಟು ಕೊಡದೆ ಸತಾಯಿಸಿದ್ದರಿಂದ ಪುಟಾಣಿ ಕುಟುಂಬದವರು ದುಷ್ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಸದ್ಯ ಪುಟಾಣಿ ಮನೆತನದ ನಂದೀಶ್, ನಾಗಪ್ಪ, ಪರಪ್ಪ, ಶಿವಾನಂದ, ಈರಪ್ಪ, ಶಂಕರ್, ಅಂಬವ್ವ, ರುಕ್ಮವ್ವ, ಮಾಲಾಶ್ರೀ, ಸುನಂದಾ ಹಾಗೂ ಪ್ರೇಮಾ ನಿಡೋಣಿ, ಚನ್ನಬಸಪ್ಪ ನಿಡೋಣಿ ಸೇರಿದಂತೆ ಒಟ್ಟು 12 ಮಂದಿ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಮೃತರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಾಲ್ವರು ಮಕ್ಕಳನ್ನ ಕಳೆದುಕೊಂಡು ಹೆತ್ತ ತಾಯಿಯ ಕಣ್ಣೀರು ನೋಡಲಾಗುತ್ತಿಲ್ಲ. ಕೊಲೆಯಾಗಿರುವ ಮಲ್ಲಪ್ಪನ ಪತ್ನಿ ಭಾರತಿಯ ಆಕ್ರಂದನ ಮುಗಿಲುಮುಟ್ಟಿದೆ. ನಾಲ್ವರು ಸಹೋದರರಿಗೆ ಒಟ್ಟು 12 ಜನ ಮಕ್ಕಳು ಇದ್ದಾರೆ.

    ಈ ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿತ್ತು. ಅದಿನ್ನೂ ಬಗೆಹರಿದಿಲ್ಲ. ಗ್ರಾಮದ ಹಿರಿಯರು ಕೂಡ ಈ ಕುಟುಂಬಗಳ ನಡುವಿನ ವಿವಾದ ಬಗೆ ಹರಿಸುವ ಪ್ರಯತ್ನ ಮಾಡಿದ್ದರೂ ಎರಡು ಕುಟುಂಬದ ನಡುವೆ ದ್ವೇಷ ಮುಂದುವರೆದಿತ್ತು ಎನ್ನಲಾಗಿದೆ. ತೋಟಕ್ಕೆ ಬಂದ ಸಹೋದರರನ್ನು ಒಬ್ಬರ ಮೇಲೊಬ್ಬರಂತೆ ಕೊಚ್ಚಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ವರದಿಯಿಂಧ ತಿಳಿದುಬಂದಿದೆ.

    ‘ರೇಪ್‌ ಮಾಡೋ ಯೋಚ್ನೆ ಇರ್ಲಿಲ್ಲ… ಮೂರು ದಿನ ಇದೇ ಜಾಗದಲ್ಲಿ ನೋಡಿ ನಾಲ್ಕನೇ ದಿನ ಹೀಗೆ ಮಾಡಿದ್ವಿ’

    ಹಿರಿಯ ಐಪಿಎಸ್ ಅಧಿಕಾರಿ ನಿಂಬಾಳ್ಕರ್‌ಗೆ ಐಎಎಂ ಉರುಳು- ಸುಪ್ರೀಂಕೋರ್ಟ್‌ ನೀಡಿದೆ ಶಾಕ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts