VIDEO: ಬಾರ್​ ಒಳಗೆ ನುಗ್ಗಿ ಗಟಗಟ ಎಣ್ಣೆ ಇಳಿಸಿದ ಕಪಿರಾಯ- ಮುಂದೇನಾಯ್ತು ನೋಡಿ...

monkey
Published on

ಮಂಡಲ (ಮಧ್ಯಪ್ರದೇಶ): ಮಂಗವೊಂದು ಮದ್ಯದಂಗಡಿಗೆ ನುಗ್ಗಿ ಮದ್ಯವನ್ನು ಗಟಗಟ ಇಳಿಸಿದ ಘಟನೆ ಮಧ್ಯಪ್ರದೇಶದ ಬಮ್ಹಾನಿ ಬಜಾರ್​ನಲ್ಲಿ ನಡೆದಿದೆ.

ಇಲ್ಲಿರುವ ಅಂಗ್ರೇಜಿ ಎಂಬ ಮದ್ಯದಂಗಡಿಗೆ ನುಗ್ಗಿದ ಮಂಗ ಮೊದಲು ಅಧಿಕಾರಿಯಂತೆ ಪುಸ್ತಕಗಳನ್ನು ಪರಿಶೀಲನೆ ನಡೆಸಿದೆ. ನಂತರ ಮದ್ಯದ ಬಾಟಲಿಯೊಂದನ್ನು ಎತ್ತಿಕೊಂಡು ಗಟಗಟನೆ ಮದ್ಯ ಸೇವಿಸಿದೆ.

ಈ ದೃಶ್ಯವನ್ನು ಕಂಡು ಬೆರಗಾದ ಅಂಗಡಿಯವ ಮೊಬೈಲ್​ ಎತ್ತಿಕೊಂಡು ವಿಡಿಯೋ ಮಾಡಿದ್ದಾರೆ. ಇದನ್ನು ನೋಡಿ ಜನರು ಅವಕ್ಕಾದದರು. ಒಳ್ಳೆಯ ಬೆಲೆಯ ಎಣ್ಣೆ ಬಾಟಲಿಯನ್ನು ಕುಡಿದು ಮುಗಿಸಿದ ಕಪಿಗೆ ತಲೆ ತಿರುಗಿದಂತೆ ಆಗಿದೆ. ನಂತರ ಅಂಗಡಿಯವರು ನೀರು ಕುಡಿಸಿ, ಬಿಸ್ಕೇಟ್ ಕೊಟ್ಟು ಉಪಚರಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

ನೀವೂ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net