ಸಿನಿಮಾದಲ್ಲಿ ಸೋನು ಸೂದ್‌ಗೆ ಹೊಡೆದರೆಂದು ಟಿವಿ ಕುಟ್ಟಿಪುಡಿ ಮಾಡಿದ ಬಾಲಕ! ನಟ ಏನೆಂದ ಕೇಳಿ...

sonu
Published on

ಮುಂಬೈ: ‘ದೂಕುಡು’ ಸಿನಿಮಾ ನೋಡುತ್ತಿದ್ದ ಬಾಲಕನೊಬ್ಬ ಅದರಲ್ಲಿಯ ಹೀರೋ ಸೋನು ಸೂದ್ ಅವರಿಗೆ ಹೊಡೆದರೆಂಬ ಕಾರಣಕ್ಕೆ ಸಿಟ್ಟಿನಿಂದ ಮನೆಯ ಟಿವಿಯನ್ನು ಕುಟ್ಟಿ ಪುಡಿ ಮಾಡಿದ್ದಾನೆ! ಕಳೆದೊಂದು ವರ್ಷಗಳಿಂದ ಸೋನು ಸೂದ್‌ ಮನೆ ಮಾತಾಗಿರುವ ನಟ. ಕರೊನಾ ಸಮಯದಲ್ಲಿ ಹಲವಾರು ಮಂದಿಗೆ ಸಹಾಯ ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ಈ ನಟನಿಗೆ ಹೊಡೆದರು ಎನ್ನುವ ಕಾರಣಕ್ಕೆ ಬಾಲಕ ಹೀಗೆ ಆಕ್ರೋಶ ಹೊರಹಾಕಿದ್ದಾನೆ.

ಸಂಗರೆಡ್ಡಿ ಊರಿನ ಏಳು ವರ್ಷದ ಬಾಲಕ ವಿರಾಟ್‌ ಇಂಥದ್ದೊಂದು ಕೃತ್ಯ ಮಾಡಿದ್ದಾನೆ. ಸೋನು ಸೂದ್‌ ಹಲವರಿಗೆ ಸಹಾಯ ಮಾಡುತ್ತಿದ್ದುದನ್ನು ಟೀವಿಯಲ್ಲಿ ನೋಡುತ್ತಿದ್ದ ಬಾಲಕನಿಗೆ ಈ ನಟನ ಬಗ್ಗೆ ಅಭಿಮಾನ ಉಕ್ಕಿಹರಿದಿದೆ. ಆದರೆ ಸಿನಿಮಾದಲ್ಲಿ ಅವರನ್ನು ಹೊಡೆಯುವುದನ್ನು ನೋಡಲು ಬಾಲಕನಿಗೆ ಆಗಲಿಲ್ಲ. ಸಿಟ್ಟು ಹೇಗೆ ತೀರಿಸಿಕೊಳ್ಳುವುದು ತಿಳಿಯದ ಬಾಲಕ ಟೀವಿಯನ್ನೇ ಒಡೆದಿದ್ದಾನೆ!

ಈತ ಮಾಡಿರುವ ವಿಷಯ ಸುದ್ದಿಯಾಗುತ್ತಿದ್ದಂತೆಯೇ ವಿಷಯ ಸೋನು ಸೂದ್‌ ಕಿವಿಗೂ ಬಿದ್ದಿದೆ. ವಿರಾಟ್ ಟಿವಿ ಪುಡಿ ಮಾಡಿದ ವಿಡಿಯೋವನ್ನು ಸೋನು ಸೂದ್ ಟ್ವೀಟ್‍ನಲ್ಲಿ ಹಂಚಿಕೊಂಡು, ಅರೆ, ಟಿವಿ ಪುಡಿ ಮಾಡಿಬಿಟ್ಯಾ। ನಿಮ್ಮ ತಂದೆ ನನಗೆ ಹೊಸ ಟಿವಿಯನ್ನು ತಂದು ಕೊಡಲು ಹೇಳಿದರೆ ಏನು ಮಾಡಲಿ ಎಂದು ಚಟಾಕಿ ಹಾರಿಸಿದ್ದು, ಇದೀಗ ವೈರಲ್‌ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net