ನೆಟ್‌ವರ್ಕ್‌ಗಾಗಿ ಮರವೇರಿದ ಬಾಲಕರು: ಸಿಡಿದು ಬಡಿದು ಓರ್ವನ ಸಾವು- ಇನ್ನುಳಿದವರ ಸ್ಥಿತಿ ಚಿಂತಾಜನಕ

tree
Published on

ಫಾಲ್ಘರ್‌ (ಮಹಾರಾಷ್ಟ್ರ): ಮೊಬೈಲ್‌ ನೆಟ್‌ವರ್ಕ್‌ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಳೆ ಬರುತ್ತಿರುವಾಗಲೇ ಮರವೇರಿದ್ದ ಬಾಲಕನೊಬ್ಬ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್​​ ಜಿಲ್ಲೆಯಲ್ಲಿ ನಡೆದಿದೆ. ಈತನ ಜತೆಗೆ ಮರವೇರಿದ್ದ ಮೂವರು ಬಾಲಕನ್ನು ಕೆಳಕ್ಕೆ ಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಜಾನುವಾರು ಮೇಯಿಸಲು ಹೋಗಿದ್ದ 12-15 ವರ್ವ ವಯಸ್ಸಿನ ಬಾಲಕರು ಮೊಬೈಲ್‌ ಫೋನ್‌ನಲ್ಲಿ ಬಳಸಿದ್ದರು. ಆದರೆ ಅವರಿಗೆ ನೆಟ್‌ವರ್ಕ್‌ ಸಿಗಲಿಲ್ಲ. ಆಗಲೇ ಜೋರು ಮಳೆ ಶುರುವಾಗಿತ್ತು. ಗುಡುಗು ಮಿಂಚು ಕೂಡ ಬರುತ್ತಿತ್ತು. ಇದನ್ನು ಲೆಕ್ಕಿಸದ ಬಾಲಕರು ಮರವೇರಿದ್ದಾರೆ.

ಇದೇ ಸಮಯದಲ್ಲಿ ಸಿಡಿಲು ಬಡಿದಿದೆ. ಅದು 15 ವರ್ಷದ ಬಾಲಕನಿಗೆ ನೇರವಾಗಿ ಬಡಿದಿದ್ದು ಅವನು ಅಲ್ಲಿಯೇ ಮೃತಪಟ್ಟರೆ, ಉಳಿದ ಮೂವರಿಗೆ ಭಾರಿ ಗಾಯಗಳಾಗಿವೆ. ದಹನು ತಾಲೂಕಿನ ಮಂಕರ್​ಪಾಡ ಎಂಬಲ್ಲಿ ಈ ಘಟನೆ ನಡೆದಿದ್ದು, ಬಾಲಕರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಹಶೀಲ್ದಾರ್​ ರಾಹುಲ್​ ಸಾರಂಗ್​ ಮಾಹಿತಿ ನೀಡಿದ್ದಾರೆ.

ಮೃತ ಬಾಲಕನನ್ನ 15 ವರ್ಷದ ರವೀಂದ್ರ ಕೋರ್ದಾ ಎಂದು ಗುರುತಿಸಲಾಗಿದೆ. ಗಾಯಗೊಂಡ ಇನ್ನುಳಿದ ಬಾಲಕರು ಸಹ 14 ರಿಂದ 16 ವರ್ಷ ಪ್ರಾಯದವರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net