ಭಯೋತ್ಪಾದಕ ಸತ್ತಾಗ ಅತ್ತಿದ್ದ ಸೋನಿಯಾ ಗಾಂಧಿ: ಬಾಟ್ಲಾ ಹೌಸ್​ ಘಟನೆ ನೆನಪಿಸಿದ ಸಚಿವ ಜೋಶಿ

prahlad
Published on

ಬೆಂಗಳೂರು: ರಾಜಸ್ಥಾನದಲ್ಲಿ‌ ನಡೆದ ಕನ್ಹಯ್ಯಲಾಲ್ ಕೊಲೆ ಆರೋಪಿಯಲ್ಲಿ ಒಬ್ಬ ಬಿಜೆಪಿ ನಾಯಕರ ಜೊತೆ ನಿಂತಿದ್ದ ಫೋಟೊ ಹರಿಬಿಟ್ಟು ಕೊಲೆಗಡುಕ ಬಿಜೆಪಿಯವನು ಎಂದು ಕಾಂಗ್ರೆಸ್ ನಾಯಕರು ಮಾಡಿದ ಆರೋಪಕ್ಕೆ‌ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ.

ಬಾಟ್ಲಾ ಹೌಸ್ ಶೂಟ್ ಔಟ್ ಪ್ರಕರಣವನ್ನು ನೆನಪಿಸಿರುವ ಅವರು ಸೋನಿಯಾ ಗಾಂಧಿ ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಇಂದು ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಪ್ರಲ್ಹಾದ ಜೋಷಿ, ಬಿಜೆಪಿಗೆ ಭಯೋತ್ಪಾದಕರ ಜೊತೆ ನಂಟಿದೆ ಎಂದು ಕಾಂಗ್ರೆಸ್ ಆರೋಪ ಮಾಡ್ತಾ ಇರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಸೋನಿಯಾ ಗಾಂಧಿ ಅಧಿಕಾರದಲ್ಲಿ ಇದ್ದಾಗ, ಮನಮೋಹನ್ ಸಿಂಗ್ ಸುಮ್ನೆ ಹೆಸರಿಗೆ ಪ್ರಧಾನಿ ಆಗಿದ್ದರು. ಅಧಿಕಾರ ನಡೆಸುತ್ತಾ ಇದ್ದದ್ದು ಸೋನಿಯಾ ಗಾಂಧಿ. ಆ ಸಮಯದಲ್ಲಿ ಬಾಟ್ಲಾ ಹೌಸ್​ನಲ್ಲಿ ಭಯೋತ್ಪಾದಕರ ಮೇಲೆ‌ ಶೂಟ್ ಔಟ್ ಆದಾಗ ಒಬ್ಬ ಭಯೋತ್ಪಾದಕ ಸತ್ತು ಹೋಗಿದ್ದ. ಆಗ ಸೋನಿಯಾ ಗಾಂಧಿ ಭಯೋತ್ಪಾದಕ ಸತ್ತಿದ್ದಕ್ಕೆ ಕಣ್ಣೀರು ಹಾಕಿದ್ದರಂತೆ. ಮಾತ್ರವಲ್ಲ ರಾಹುಲ್ ಗಾಂಧಿ ಅಫ್ಜಲ್ ಗುರು ಜೊತೆ ಫೋಟೊ ತೆಗೆಸಿಕೊಂಡವರು. ಇಂಥವರು ಇಂದು ಬಿಜೆಪಿ ಮೇಲೆ ಆರೋಪ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net