ತಾಯಿಯ ಅಕ್ಕನ ಮಗನನ್ನು ಪ್ರೀತಿಸುತ್ತಿರುವೆ- ಮದುವೆಯಾದರೆ ಕಾನೂನಿನಡಿ ಅಪರಾಧವಾಗುತ್ತದೆಯೆ?

nyayadevate
Published on
ನಾವು ಹಿಂದೂಗಳು. ನಮ್ಮ ತಾಯಿಯ ಅಕ್ಕನ ಮಗನ ಪ್ರೀತಿಗೆ ಬಿದ್ದಿದ್ದೇನೆ. ಆದರೆ ಅವರು ಅಣ್ಣನ ಸಮಾನ ಎಂದು ಹೇಳುತ್ತಿದ್ದಾರೆ. ನಾನೊಮ್ಮೆ ಅವರನ್ನು ಮದುವೆಯಾದರೆ ಕಾನೂನು ಸಮಸ್ಯೆ ಆಗುತ್ತದೆಯೆ?

ಉತ್ತರ: ಹಿಂದೂ ವಿವಾಹ ಕಾಯ್ದೆಯ ಕಲಂ 5(iv) ಪ್ರಕಾರ, ನಿಮ್ಮ ಅಕ್ಕನ ಮಗ ಹಾಗೂ ನೀವು ಇಬ್ಬರೂ ಪ್ರಾಹಿಬಿಟೆಡ್‌ ರಿಲೇಷನ್ಷಿಪ್‌/ನಿಷೇಧಿತ ಸಂಬಂಧಗಳು ಎನ್ನುವ ಗುಂಪಿಗೆ ಬರುತ್ತೀರಿ.

ಹಾಗಿರುವುದರಿಂದ ಈ ವಿವಾಹವು ವಿವಾಹ ಕಾಯ್ದೆಯ ಕಲಂ 11ರಲ್ಲಿ ನಮೂದಿಸಿರುವ ಶೂನ್ಯ ವಿವಾಹದ ಪರಿಮಿತಿಗೆ ಬರುತ್ತದೆ. ಕಲಂ 18ರಂತೆ ಇದು ಶಿಕ್ಷಾರ್ಹವೂ ಆಗುತ್ತದೆ. ನೀವು ಈ ಸಂಬಂಧವನ್ನು ಮುಂದುವರೆಸದೇ ಇರುವುದು ಒಳ್ಳೆಯದು. ಈ ಬಗ್ಗೆ ನೀವು ಯಾರಾದರೂ ವಿವಾಹ ಸಂಧಾನಕಾರರ, /ಮ್ಯಾರೇಜ್ ಕೌನ್ಸೆಲರ್‌ ಸಲಹೆ ಪಡೆಯುವುದೂ ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net