

ಕೋಲ್ಕತಾ: ತಮಾಷೆಗಾಗಿ ಸಹೋದ್ಯೋಗಿಗಳ ಮಾಡಿದ ಕೆಲಸದಿಂದಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕೋಲ್ಕತಾದ ಹೂಗ್ಲಿಯಲ್ಲಿ ನಡೆದಿದೆ.
ಬ್ರೂಕ್ ಜ್ಯೂಟ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದವರು, ರೆಹಮತ್ ಅಲಿ ಎನ್ನುವವರ ಗುದದ್ವಾರಕ್ಕೆ ಏರ್‌ಪಂಪ್ ಇಟ್ಟು ಪಂಪ್ ಮಾಡಿದ್ದಾರೆ. ಅಲಿ ಎಷ್ಟೇ ವಿರೋಧಿಸಿದರೂ ಸಹೋದ್ಯೋಗಿಗಗಳು ತಮಾಷೆಗಾಗಿ ಹೀಗೆ ಮಾಡಿದ್ದು, ಇದೇ ಅಲಿ ಅವರ ಪ್ರಾಣಕ್ಕೆ ಮುಳುವಾಗಿದೆ.
ರೆಹಮತ್ ಅಲಿ ಅವರು ನೈಟ್ ಶಿಫ್ಟ್‌ನಲ್ಲಿದ್ದರು. ಗಿರಣಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಇತರ ಸಹದ್ಯೋಗಿಗಳು ಏರ್‌ಪಂಪ್ ತಂದು ಪಂಪ್ ಮಾಡಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ಅಲಿ ಅವರು ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡ ಸಹದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ. ಅವರು ಮೃತಪಟ್ಟಿದ್ದಾರೆ.
ಗುದದ್ವಾರದಿಂದ ಒತ್ತಡವಾಗಿ ಹಾಕಿರುವ ಗಾಳಿಯಿಂದ ಅಲಿ ಅವರ ಯಕೃತ್ತು ಸೇರಿದಂತೆ ಇತರ ಅಂಗಾಗಳು ಹಾನಿಯಾಗಿರುವ ಕಾರಣ, ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಸಹೊದ್ಯೋಗಿಗಳ ಮೇಲೆ ಕೇಸ್ ದಾಖಲಾಗಿದೆ. ಪ್ರಮುಖ ಆರೋಪಿ ಶೆಹಜಾದಾ ಖಾನ್ ಪರಾರಿಯಾಗಿದ್ದಾನೆ. ಈ ಬಗ್ಗೆ ಮಿಲ್ ಮಾಲೀಕರು ಮೌನವಾಗಿರುವುದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ.