ಮದುವೆ ಊಟ ಮಾಡಿದ ಭದ್ರಾವತಿಯ ಗ್ರಾಪಂ ಕಾರ್ಯದರ್ಶಿ ಸಾವು- 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ

grapam
Published on

ಶಿವಮೊಗ್ಗ: ನಾಲ್ಕು ದಿನಗಳ ಹಿಂದೆ ಭದ್ರಾವತಿ ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ‌ ನಡೆದ ಮದುವೆಯಲ್ಲಿ ಊಟ ಮಾಡಿ ಅಸ್ವಸ್ಥಗೊಂಡ ಹಲವರ ಪೈಕಿ ಇಂದು ದಾಸರಕಲ್ಲಳ್ಳಿ ಗ್ರಾಮಪಂಚಾಯತ್‌ ಕಾರ್ಯರ್ಶಿ ಮೃತಪಟ್ಟಿದ್ದಾರೆ.

ದಿನೇಶ್ ಸಿಂಗ್ ಮೃತಪಟ್ಟಿರುವ ದುರ್ದೈವಿ. ನಾಗತಿಬೆಳಗಲು ಗ್ರಾಮದ ಕಲ್ಯಾಣಮಂಟಪದಲ್ಲಿ ನಡೆದ ಮದುವೆಯಲ್ಲಿ ಊಟ ಮಾಡಿದ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ ಚಿಕಿತ್ಸೆ ಫಲಿಸದೇ ದಿನೇಶ್ ಸಿಂಗ್ ಮೃತಪಟ್ಟಿದ್ದಾರೆ.

ಅರದೊಟ್ಲು ಗ್ರಾಮದ ನಿವಾಸಿಯೊಬ್ಬರ ಮದುವೆ ನಾಗತಿಬೆಳಗಲು ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಈ ಮದುವೆಯಲ್ಲಿ ಭಾಗಿಯಾಗಿ ಊಟ ಮಾಡಿದವರಲ್ಲಿ ಕಾಣಿಸಿಕೊಂಡ ವಾಂತಿ, ಬೇದಿ, ಹೊಟ್ಟೆನೋವು, ತಲೆಸುತ್ತು, ಜ್ವರ ಕಾಣಿಸಿಕೊಂಡಿದೆ. ಅಸ್ವಸ್ಥರು ಹೊಳೆಹೊನ್ನೂರು, ಭದ್ರಾವತಿ ಹಾಗೂ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಧುವಿನ ಸಂಬಂಧಿಕರು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಸಾಂಕ್ರಾಮಿಕ ರೋಗಗಳು‌ ಕಾಣಿಸಿಕೊಂಡಿವೆಯೇ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net