ಸೆಕ್ಸ್​ಡಾಲ್​ ಜತೆ ವರ್ಷ ಇದ್ದೆ- ಯುವತಿಗಿಂತ ಇದೇ ಬೆಸ್ಟ್ ಅನ್ನಿಸಿ ಮದ್ವೆಯಾಗ್ತಿದ್ದೇನೆ ಎಂದ ಯುವಕ!

sexdoll
Published on

ಹಾಂಗಕಾಂಗ್​: ಇತ್ತೀಚೆಗೆ ಬಾಡಿಬಿಲ್ಡರ್​ ಒಬ್ಬ ಸೆಕ್ಸ್​ಡಾಲ್​ ಜತೆ ಮದುವೆ ಮಾಡಿಕೊಂಡು ಭಾರಿ ಸುದ್ದಿಯಾಗಿದ್ದ. ಅದರ ಬೆನ್ನಲ್ಲೇ ಇದೀಗ ಯುವಕನೊಬ್ಬ ಸೆಕ್ಸ್​ಡಾಲ್​ ಜತೆ ಎಂಗೇಜ್​ಮೆಂಟ್​ ಮಾಡಿಕೊಂಡು ಸುದ್ದಿಯಲ್ಲಿದ್ದಾನೆ.

ತ್ಸೆ ಟಿನ್ ವಿಂಗ್ ಎಂಬ 36 ವರ್ಷದ ಯುವಕ ಭರ್ಜರಿ ಸಮಾರಂಭದಲ್ಲಿ ಸೆಕ್ಸ್​ಡಾಲ್​ ಜತೆ ನಿಶ್ಚಿತಾರ್ಥ ಮಾಡಿಕೊಂಡು ಅದರ ಜತೆಯಲ್ಲಿಯೇ ಮದುವೆಯಾಗುವ ತಯಾರಿ ನಡೆಸಿದ್ದಾನೆ. ಇದರ ಜತೆಗೆ ಮದುವೆಯಾಗಲು ತನ್ನ ಪಾಲಕರ ಒಪ್ಪಿಗೆಯನ್ನು ಕೂಡ ಈತ ಪಡೆದುಕೊಂಡಿದ್ದಾನೆ.

10 ವರ್ಷಗಳ ಹಿಂದೆಯೇ ಈ ಗೊಂಬೆಯತ್ತ ಆಕರ್ಷಿತನಾಗಿದ್ದೆ. ಆದರೆ ನಿಜವಾದ ಮಹಿಳೆಯ ಬದಲು ಇದರತ್ತ ಆಕರ್ಷಣೆಯಾಗಿರುವುದು ಸರಿಯಲ್ಲ ಎನ್ನಿಸಿತು. ನಂತರ ಯಾಕೋ ಈ ಸೆಕ್ಸ್​ಡಾಲ್​ನ ರೂಪ, ಮೈಮಾಟ ನೋಡಿ ಸುಮ್ಮನೆ ಇರಲು ಆಗಲೇ ಇಲ್ಲ. ಆಗಲೇ ಹೋಗಿ ಖರೀದಿಸಬೇಕು ಎಂದುಕೊಂಡೆ. ಆದರೆ ಬಲು ದುಬಾರಿಯಾಗಿತ್ತು. ಅಷ್ಟೊಂದು ಹಣ ನನ್ನ ಬಳಿ ಇರಲಿಲ್ಲ. ಅದಕ್ಕೆ ಸುಮ್ಮನಾಗಿದ್ದೆ.

ತದನಂತರ ಯುವತಿಯ ಸಂಪರ್ಕಕ್ಕೆ ಬಂದೆ. ಆದರೆ ಸೆಕ್ಸ್​ಗೊಂಬೆಯ ಮೋಹ ಮಾತ್ರ ಬಿಡಲಿಲ್ಲ. ವರ್ಷಗಳು ಕಳೆದರೂ ಆ ಬೊಂಬೆ ನನ್ನನ್ನು ಆಕರ್ಷಿಸುತ್ತಾ ಬಂತು. ಬರಬರುತ್ತಾರೆ ನಿಜವಾದ ಯುವತಿಯರಿಗಿಂತ ಈ ಗೊಂಬೆಯೇ ಬೆಸ್ಟ್​ ಅನ್ನಿಸತೊಡಗಿತು. ಹೇಗಾದರೂ ಮಾಡಿ ಅದನ್ನು ಖರೀದಿ ಮಾಡಬೇಕೆಂದು ಪಣತೊಟ್ಟೆ ಎಂದು ಯುವಕ ಹೇಳಿದ್ದಾನೆ.

10 ವರ್ಷಗಳ ಹಿಂದೆ ನೋಡಿದ್ದ ಸೆಕ್ಸ್​ಡಾಲ್​ಗೆ 80 ಸಾವಿರ ಯುವಾನ್​ (ಸುಮಾರು 9.8 ಲಕ್ಷ ರೂಪಾಯಿ) ಇತ್ತಂತೆ. ಈಗ ಆತನಿಗೆ ಸಿಲಿಕಾನ್​ ಡಾಲ್​ ಸಿಕ್ಕಿದ್ದು, ಅದರ ಬೆಲೆ 11.34 ಲಕ್ಷ ರೂಪಾಯಿ ಆಗಿದೆ. ಅದರ ಜತೆ ರಾತ್ರಿ- ಹಗಲು ಕಾಲ ಕಳೆದ. ಅದಕ್ಕೆ ಮೋಚಿ ಎಂದು ಹೆಸರಿಟ್ಟ. ಅದರ ಜತೆ ಕಾಲ ಕಳೆದ ಮೇಲೆ ನಿಜವಾಗಿಯೂ ಆತನಿಗೆ ಯುವತಿಯರಿಗಿಂತ ಇದೇ ಬೆಸ್ಟ್​ ಎನಿಸಿದೆಯಂತೆ. ಅದಕ್ಕಾಗಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾನೆ.

ಸದ್ಯ ಅದರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಅದರ ಕೋಮಲವಾದ ದೇಹವನ್ನು ನೋಡಿ ಇದುವರೆಗೆ ನಾನು ಸೆಕ್ಸ್​ ಮಾಡಿಲ್ಲ. ಅದಕ್ಕೆ ಎಲ್ಲಿ ಹಾನಿಯಾಗುವುದೋ ಎಂಬ ಭಯವಿದೆ. ಅದರ ಜತೆ ಡೇಟಿಂಗ್​ ಮಾಡಿದ್ದೇನೆ. ಮಲಗಿದ್ದೇನೆ. ಆದರೆ ಸೆಕ್ಸ್​ ಮಾತ್ರ ಮಾಡಿಲ್ಲ. ಆದರೆ ಮದುವೆಯಾದ ಮೇಲೆ ಏನಾಗುವುದೋ ನೋಡಬೇಕು ಎಂದೂ ಹೇಳಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net