

ನವದೆಹಲಿ: ಸಂಸದ ರಾಹುಲ್ ಗಾಂಧಿಯವರು ಸದ್ಯ ಟ್ರೋಲ್ ಪೇಜ್‌ನಲ್ಲಿಯೇ ಹೆಚ್ಚೆಚ್ಚು ಕಾಣಿಸಿಕೊಳ್ಳಲು ಶುರುವಾಗಿಬಿಟ್ಟಿದ್ದಾರೆ. ಒಲ್ಲದ ಗಂಡನಿಗೆ... ಎನ್ನುವ ಹಾಗೆ ಇವರು ಮಾಡಿರುವ ಭಾಷಣಗಳಲ್ಲಿ ಎಡವಟ್ಟುಗಳನ್ನೇ ಎತ್ತಿತೋರಿಸಿ ಟ್ರೋಲ್‌ಪುಟದಲ್ಲಿ ದಿನವೂ ಟ್ರೋಲ್ ಮಾಡುತ್ತಿದ್ದಾರೆ ಇವರ ವಿರೋಧಿಗಳು.
ಇದೀಗ ಹೆಸರು ಹೇಳದೇ ‘ಎಂ’ ಅಕ್ಷರದವರನ್ನು ಟೀಕಿಸೋ ಭರದಲ್ಲಿ ಪುನಃ ಟ್ರೋಲ್ ಆಗಿದ್ದಾರೆ. ಹೆಚ್ಚಿನ ಸರ್ವಾಧಿಕಾರಿಗಳ ಹೆಸರು 'ಎಂ' ಎಂಬ ಅಕ್ಷರದಿಂದಲೇ ಆರಂಭವಾಗುವುದೇಕೆ ಎಂದು ಪ್ರಶ್ನಿಸುವ ಮೂಲಕ ಇದೀಗ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಹಾಕಿಕೊಂಡಿದ್ದಾರೆ.
ಕೆಲವು ನಾಯಕರ ಹೆಸರನ್ನು ಟ್ವಿಟರ್‌ನಲ್ಲಿ ಉಲ್ಲೇಖ ಮಾಡಿರುವ ರಾಹುಲ್ ಗಾಂಧಿ ಈ ಎಲ್ಲ ಸರ್ವಾಧಿಕಾರಿಗಳ ಹೆಸರು ’ಎಂ’ ಅಕ್ಷರದಿಂದಲೇ ಇರುವ ಔಚಿತ್ಯವೇನು ಎಂದು ಪ್ರಶ್ನಿಸಿದ್ದಾರೆ. ಮಾರ್ಕೋಸ್, ಮುಸೊಲಿನಿ, ಮಿಲೋಸೆವಿಕ್, ಮುಬಾರಕ್, ಮೊಬುಟು, ಮುಷರಫ್, ಮೈಕೊಂಬೆರೊ ಸಾಕಷ್ಟು ಸರ್ವಾಧಿಕಾರಿಗಳ ಹೆಸರು ಎಂ ಎಂಬ ಅಕ್ಷರದಿಂದಲೇ ಆರಂಭವಾಗವುದೇಕೆ ಎಂದು ಕೇಳಿದ್ದಾರೆ.
ರಾಹುಲ್‌ಗಾಂಧಿಯವರು ಯಾರನ್ನು ಟಾರ್ಗೆಟ್ ಮಾಡಿಕೊಂಡು ಈ ಮಾತನ್ನು ಹೇಳುತ್ತಿದ್ದಾರೆ ಎಂದು ತಿಳಿದಿರುವ ಕಮೆಂಟಿಗರು ಅವರ ಕಾಲೆಳೆಯಲು ಶುರು ಮಾಡಿದ್ದಾರೆ.
ಇಲ್ಲಿ ಲಿಸ್ಟ್‌ನಲ್ಲಿ ಇರುವವರೆಲ್ಲಾ ಸರಿ... ಹಾಗಿದ್ರೆ ನಿಮ್ಮ ಪಕ್ಷದ ಪ್ರಧಾನಿಯಾದ್ದವರ (ಮನ್‌ಮೋಹನ್‌ಸಿಂಗ್) ಹೆಸರು ಕೂಡ ಎಂ ಅಕ್ಷರದಿಂದಲೇ ಶುರುವಾಗುತ್ತದೆಯಲ್ಲವೆ ಎಂದು ಹಲವರು ಕಮೆಂಟ್ ಮಾಡಿದ್ದರೆ, ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನುಭಾವನ ಹೆಸರು ಕೂಡ ’ಎಂ’ನಿಂದಲೇ ಶುರುವಾಗುವುದು. ಅವರನ್ನು ನೀವು ಈ ರೀತಿ ಟೀಕೆ ಮಾಡುವುದು ಸರಿಯೆ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ.
ಮಾಜಿ ಹಾಗೂ ಭವಿಷ್ಯದ ಅಧ್ಯಕ್ಷರೇ, ರಾಜಕೀಯಕ್ಕಿಂತಲೂ ಟ್ರೋಲ್ ಪುಟದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಬದಲು ನೀವು ಏನು ಮಾತನಾಡುತ್ತಿದ್ದೀರಿ ಎಂಬ ಬಗ್ಗೆ ಒಂದಿಷ್ಟು ಗಮನ ಹರಿಸಿ, ತಮಿಳುನಾಡಿನ ಪ್ರವಾಸದ ವೇಳೆ ಮಾಡಿಕೊಂಡಿರುವ ಎಡವಟ್ಟುಗಳು, ನಮ್ಮ ಸೈನಿಕರ ಬಗ್ಗೆ ಮಾತನಾಡಿರುವ ಕೆಟ್ಟ ಮಾತುಗಳಿಂದ ಇದಾಗಲೇ ಸಾಕಷ್ಟು ಟ್ರೋಲ್ ಆಗಿರುವ ನೀವು, ಸ್ವಲ್ಪ ದಿನ ಸುಮ್ಮನಿದ್ದು ಬಿಡಿ ಎಂದು ಹಲವರು ರಾಹುಲ್‌ಗಾಂಧಿ ವಿರುದ್ಧ ಕಮೆಂಟ್ ಮೂಲಕ ಕಿಡಿ ಕಾರಿದ್ದಾರೆ.