ಒಂದೇ ತಿಂಗಳಲ್ಲಿ 49 ಲವ್​ ಜಿಹಾದಿಗಳು ಅರೆಸ್ಟ್​! ಬಾಯಿಬಿಡಲು ಹೆದರುತ್ತಿರುವ ಯುವತಿಯರು

love jihad
Published on
ಲಖನೌ: ಈಗ ದೇಶಾದ್ಯಂತ ಮತಾಂತರ ನಿಷೇಧ ಕಾಯ್ದೆ ಭಾರಿ ಸದ್ದು ಮಾಡುತ್ತಿದೆ. ಆಮಿಷ ಒಡ್ಡಿ, ಮೋಸದಿಂದ, ಹಿಂದೂ ಹೆಸರು ಹೇಳಿಕೊಂಡು ಯುವತಿಯರನ್ನು ಮರಳು ಮಾಡಿ ನಂತರ ಅವರ ಧರ್ಮವನ್ನು ಬದಲಾಯಿಸುವ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಅರಿತಿರುವ ಕೆಲವು ಸರ್ಕಾರಗಳು ಈ ರೀತಿಯ ಲವ್​ ಜಿಹಾದಿಗಳಿಗೆ ಪಾಠ ಕಲಿಸಲು  ಮುಂದಾಗಿವೆ.

ಉತ್ತರ ಪ್ರದೇಶ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಮೊದಲ ಬಾರಿಗೆ ಜಾರಿಗೆ ತಂದ ಬೆನ್ನಲ್ಲೇ ಬಿಜೆಪಿ ಆಡಳಿತ ಇರುವ ಕೆಲವು ಸರ್ಕಾರಗಳು ಇದನ್ನು ಜಾರಿಗೆ ತಂದಿವೆ.

ಇದೀಗ ಉತ್ತರ ಪ್ರದೇಶದ ಸರ್ಕಾರ ಕಾನೂನು ಜಾರಿಗೆ ತಂದು ಒಂದು ತಿಂಗಳು ಕಳೆದಿದೆ. ಈ ತಿಂಗಳಲ್ಲಿಯೇ ಅಚ್ಚರಿ ಎನಿಸುವಷ್ಟು ಕೇಸ್​ಗಳು ದಾಖಲಾಗಿದ್ದು, ಈ ಪರಿಯಲ್ಲಿ ಮತಾಂತರ ನಡೆಯುತ್ತಿವೆಯೇ ಎಂದು ಹುಬ್ಬೇರಿಸುವಂತಾಗಿದೆ.
ಒಟ್ಟು 14 ಪ್ರಕರಣಗಳು ದಾಖಲಾಗಿದ್ದು, 49 ಮಂದಿಯನ್ನು ಮತಾಂತರ ನಿಷೇಧ ಕಾಯ್ದೆ ಅಡಿ ಬಂಧಿಸಲಾಗಿದೆ. ಈ 14 ಪ್ರಕರಣಗಳಲ್ಲಿ 12 ಪ್ರಕರಣಗಳಲ್ಲಿ ಹಿಂದೂ ಯುವತಿಯರನ್ನು ಮತಾಂತರಿಸುವ ಯತ್ನಗಳು ನಡೆದಿವೆ. ಇಬ್ಬರು ಯುವತಿಯರು ಮತಾಂತರದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಈ ಪ್ರಕರಣಗಳ ಪೈಕಿ ಮತಾಂತರಗೊಂಡಿರುವ ಸಂಬಂಧಿಕರು, ಪಾಲಕರು ದೂರು ದಾಖಲಿಸಿರುವುದೇ ಹೆಚ್ಚು. ಒಮ್ಮೆ ಮತಾಂತರಗೊಂಡು, ನರಕದ ಕೂಪಕ್ಕೆ ತಳ್ಳಲ್ಪಟ್ಟ ಯುವತಿಯರು ಜೀವ ಬೆದರಿಕೆಯಿಂದ ಸತ್ಯವನ್ನು ಮುಚ್ಚಿಟ್ಟಿರುವ ಪ್ರಕರಣಗಳು ಇನ್ನೆಷ್ಟೋ ಬೆಳಕಿಗೆ ಬರಬೇಕಿದೆ.ಏಕೆಂದರೆ ಈಗ ದಾಖಲಾಗಿರುವ ಕೇಸ್​ಗಳ ಪೈಕಿ ಕೇವಲ ಇಬ್ಬರು ಯುವತಿಯರು ಧೈರ್ಯದಿಂದ ಮುಂದೆ ಬಂದು ಕೇಸು ದಾಖಲು ಮಾಡಿದ್ದರೆ, ಉಳಿದವರ ಪೈಕಿ ಹೆಚ್ಚಿನವರು ಪ್ರಾಣದ ಭಯದಿಂದ ತಾವು ಸ್ವ ಇಚ್ಛೆಯಿಂದ ಹೋಗಿರುವುದಾಗಿ ತಿಳಿಸುತ್ತಿದ್ದಾರೆ.

18 ವರ್ಷ ಮೇಲ್ಪಟ್ಟ ಯುವತಿಯರು ಸ್ವ ಇಚ್ಛೆಯಿಂದ ಮತಾಂತರಗೊಂಡಿದ್ದರೆ,  ಅವರು ಅಂಥ ಹೇಳಿಕೆ ನೀಡಿದರೆ ಯಾರೇ ಅದರ ಮಧ್ಯೆ ಪ್ರವೇಶ ಮಾಡುವಂತಿಲ್ಲ ಎಂದು ಹೈಕೋರ್ಟ್​ ಒಳ್ಳೆಯ ಉದ್ದೇಶಕ್ಕೆ ಹೇಳಿದ್ದರೂ , ಮತಾಂತರಿಗಳಿಗೆ ಇದೊಂದು ರೀತಿಯಲ್ಲಿ ವರದಾನವಾದಂತಿದೆ.

ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಪ್ರಕರಣ ಒಂದೆಡೆಯಾದರೆ,  ಉತ್ತರ ಪ್ರದೇಶದ ಅಜ್ಮಾಘರ್​ನಲ್ಲಿ ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಂಕಿ ಅಂಶಗಳ ಪ್ರಕಾರ ಬಿಜನೋರ್‍ನಲ್ಲಿ ಮೂರು, ಶಹ್ಜಾಪುರದಲ್ಲಿ 2 ಪ್ರಕರಣಗಳು ದಾಖಲಾಗಿದ್ದರೆ, ಉಳಿದಂತೆ ಬರೇಲಿ, ಮುಜಾಫರ್, ಮೌ, ಸಿತಾಪುರ, ಹರದೋಯ್, ಇಟಾ, ಕನ್ನೂಜ್, ಅಜ್ಮಾಘ್ ಮತ್ತು ಮೊರಾಬಬಾದ್ ಜಿಲ್ಲೆಗಳ ಪ್ರಕರಣಗಳಾಗಿವೆ. ಪ್ರಕರಣವೊಂದರಲ್ಲಿನ ಮಹಿಳೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ. ಯುವತಿಯರು ಭಯದಿಂದ ಹೇಳಿಕೆ ನೀಡದೇ ಇರುವ ಕಾರಣ, ಇನ್ನೂ ಹೆಚ್ಚಿನ ಪ್ರಕರಣ ಬೆಳಕಿಗೆ ಬರುತ್ತಿಲ್ಲ ಎನ್ನುವ ಆತಂಕವೂ ಇದೆ.

https://www.vijayavani.net/love-jihad-ludhiana-meerut-ekta-deshwal-shakib-aman-murder-chopped/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net