ರಾಖಿಯ ಬದಲು ಪ್ರಧಾನಿಗೆ ಆಡಿಯೋ ಸಂದೇಶ ಕಳುಹಿಸಿದ ಲತಾ ಮಂಗೇಶ್ಕರ್‌- ಏನಿದೆ ಕೇಳಿ...

latha mangeshkar
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರತಿವರ್ಷವೂ ರಕ್ಷಾಬಂಧನದ ಶುಭ ಸಂದರ್ಭದಲ್ಲಿ ರಾಖಿಯನ್ನು ಕಳುಹಿಸುತ್ತಿದ್ದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರು ಈ ಬಾರಿ ಆಡಿಯೋ ಸಂದೇಶವನ್ನು ಕಳುಹಿಸಿ್ದಾರೆ.

ಆಡಿಯೋದಲ್ಲಿಯೇ ಪ್ರಧಾನಿಯವರ ಕುರಿತು ಭಾವಪೂರ್ಣ ಸಂದೇಶ ಕಳುಹಿಸಿರುವ ಲತಾ, ಕರೊನಾ ವೈರಸ್‌ ಹಿನ್ನೆಲೆಯಲ್ಲಿ ರಾಖಿಯ ಬದಲು ಆಡಿಯೋ ಸಂದೇಶವನ್ನು ಕಳುಹಿಸಿದ್ದಾರೆ.

ಅದರಲ್ಲಿ ಲತಾ ಅವರು ಭಾವಪೂರ್ಣವಾಗಿ ಪ್ರಧಾನಿ ಮೋದಿಯವರಿಗೆ ಕೆಲವೊಂದು ಮಾತುಗಳನ್ನು ಹೇಳಿದ್ದಾರೆ.

ಆಡಿಯೋದಲ್ಲಿ ಅವರು ಏನು ಹೇಳಿದ್ದಾರೆ ಕೇಳಿ:

ನರೇಂದ್ರ ಭಾಯಿ, ನಿಮಗೆ ನಾನು ರಾಖಿ ಕಳುಹಿಸಲು ಬಯಸಿದ್ದೆ. ಆದರೆ ಅದು ಏಕೆ ಸಾಧ್ಯವಾಗುತ್ತಿಲ್ಲ ಈ ಬಾರಿ ಎಂದು ಇಡೀ ದೇಶಕ್ಕೇ ಗೊತ್ತಿದೆ. ನನ್ನಂತೆಯೇ ರಾಖಿಯ ಶುಭ ಸಂದರ್ಭದಲ್ಲಿ ದೇಶದ ಅನೇಕ ಸಹೋದರಿಯರು ನಿಮ್ಮ ಕೈಗೆ ರಾಖಿ ಕಟ್ಟಲು ಬಯಸಿದ್ದರು. ಆದರೆ ಅವರ್ಯಾರಿಗೂ ಈ ಬಾರಿ ಅದು ಸಾಧ್ಯವಾಗುತ್ತಿಲ್ಲ.

ನೀವು ದೇಶಕ್ಕಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಇದಕ್ಕೆ ತುಂಬಾ ಧನ್ಯವಾದ ಹಾಗೂ ಅಭಿನಂದನೆಗಳು. ನಿಮ್ಮ ಕೆಲಸವನ್ನು ದೇಶವಾಸಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಸಾಧ್ಯವಾದರೆ ಈ ನಿಮ್ಮ ಸಹೋದರಿಗೆ ರಾಖಿಯ ಸಂದರ್ಭದಲ್ಲಿ ಒಂದು ಮಾತನ್ನು ಕೊಡಿ. ಅದೇನೆಂದರೆ ನೀವು ಭಾರತವನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗುವಿರೆಂಬ ಆಶ್ವಾಸನೆ ನೀಡಿ ಎಂದು ಲತಾ ಹೇಳಿದ್ದಾರೆ.

ಲತಾ ಮಂಗೇಶ್ಕರ್ ಟ್ವಿಟರ್ ಗೆ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಲತಾ ದೀದಿ, ರಕ್ಷಾ ಬಂಧನದ ಈ ಶುಭ ಸಂದರ್ಭದಲ್ಲಿ, ನಿಮ್ಮ ಈ ಭಾವಪೂರ್ಣ ಸಂದೇಶವು ಅಪಾರ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡುತ್ತದೆ. ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದದಿಂದ, ನಮ್ಮ ದೇಶವು ಹೊಸ ಎತ್ತರವನ್ನು ಮುಟ್ಟುತ್ತದೆ ಮತ್ತು ಹೊಸ ಯಶಸ್ಸನ್ನು ಸಾಧಿಸುತ್ತದೆ. ನೀವು ಆರೋಗ್ಯವಾಗಿರಿ ಮತ್ತು ದೀರ್ಘಕಾಲ ಬದುಕಲಿ, ಇದು ದೇವರಿಗೆ ನನ್ನ ಪ್ರಾರ್ಥನೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net