

ಹೈದರಾಬಾದ್: ತಾನು ಬಿಡುವ ವಾಯುವನ್ನು (ಹೂಂಸು) ಮಾರಿ ವಾರಕ್ಕೆ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ನಟಿ ಸ್ಟೇಫನಿ ಮಾಟಿಯೋಗೆ ಹೃದಯಾಘಾತವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೂಂಸು ಎನ್ನುವ ಪದವನ್ನು ನೆನೆಸಿಕೊಂಡರೆ ಎಲ್ಲರೂ ಮೂಗು ಮುಚ್ಚಿಕೊಳ್ಳುತ್ತಾರೆ. ಆದರೆ ಈಕೆಯದ್ದು ವಿಚಿತ್ರ ಖಯಾಲಿ, ಅದೇನೆಂದರೆ ಹೂಂಸನ್ನು ಮಾರಿ ತಿಂಗಳಿಗೆ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಾಳೆ. ಭಾರಿ ಜನಪ್ರಿಯ ಆಗಿರುವ ಈ ನಟಿಯ ಹೂಂಸನ್ನು ಖರೀದಿಸಲು ಅಭಿಮಾನಿಗಳು ಮುಗಿಬೀಳುತ್ತಾರಂತೆ. ಈ ವಿಷಯವನ್ನು ಖುದ್ದು ಈ ನಟಿಯೇ ಹೇಳಿಕೊಂಡಿದ್ದಾಳೆ.
ಈಕೆ ತನ್ನ ವಾಯುವನ್ನು ಜಾರ್ನಲ್ಲಿ ಹೂವಿನ ದಳಗಳಿಂದ ಪ್ಯಾಕ್ ಮಾಡಿ ತನ್ನ ಅಭಿಮಾನಿಗಳಿಗೆ ನೀಡುತ್ತಿದ್ದಾಳೆ. ಹೀಗೆ ಮಾಡುವುದರಿಂದ ಹೂವಿನ ದಳಗಳು ಮತ್ತಷ್ಟು ಪರಿಮಳಯುಕ್ತವಾಗಿಸುತ್ತವಂತೆ. ಈಕೆಯ ಅಭಿಮಾನಿಗಳಿಂದ ಹೂಂಸಿಗೆ ಬೇಡಿಕೆ ಬರುತ್ತಲೇ ಇದೆ. ಅಷ್ಟೇ ಅಲ್ಲದೇ ಇವಳು ಧರಿಸುವ ಬ್ರಾಗಳು, ಪ್ಯಾಂಟಿಗಳು, ಬಟ್ಟೆ ಮತ್ತು ಸಾಬೂನುಗಳಿಗೂ ಬೇಡಿಕೆಯಿದ್ದು ಇದನ್ನೂ ಮಾರಾಟ ಮಾಡುತ್ತಿದ್ದಾಳೆ.
ತನ್ನ ಹೂಂಸನ್ನು ಸೆರೆ ಹಿಡಿದು ಜಾರ್ನಲ್ಲಿ ಹಾಕುತ್ತಾಳೆ ಎಂದು ಈಕೆಯೇ ಹೇಳಿಕೊಂಡಿದ್ದಾರೆ. ರಿಯಾಲಿಟಿ ಟಿ.ವಿ ಶೋ ’90 ಡೇ ಫಿಯಾನ್ಸಿ’ ನಲ್ಲಿ ಕಾಣಿಸಿಕೊಂಡ ನಂತರ ಈಕೆ ಮೊದಲು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು ಮತ್ತು ಅಂದಿನಿಂದ ತನ್ನದೇ ಆದ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದಾಳೆ. ಅಷ್ಟಕ್ಕೂ ಈಕೆಯ ಹೂಸನ್ನು ತೆಗೆದುಕೊಂಡು ಅಭಿಮಾನಿಗಳು ಅದೇನು ಮಾಡುತ್ತಾರೋ ಗೊತ್ತಿಲ್ಲ!
ಸದ್ಯ ಈಕೆಯ ಗಳಿಕೆಗೆ ಭಾರಿ ಹೊಡೆತ ಬಿದ್ದಿದೆ. ಇದ್ದಕ್ಕಿದ್ದಂತೆಯೇ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದು ಹೃದಯಾಘಾತದ ಸೂಚನೆ ಎಂದಿರುವ ವೈದ್ಯರು ತೀವ್ರ ನಿಗಾ ಘಟಕದಲ್ಲಿಟ್ಟುಕೊಂಡು ಚಿಕಿತ್ಸೆ ನೀಡಲಾಗಿದೆ.
ಬೀನ್ಸ್, ಮೊಸರು, ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವ ಮೂಲಕ ಗ್ಯಾಸ್ನನ್ನು ಹೆಚ್ಚು ಮಾಡಿಕೊಳ್ಳುತ್ತೇನೆ ಎಂದು ಈಕೆ ಸಂದರ್ಶನದಲ್ಲಿ ಹೇಳಿದ್ದಳು. ಇದೇ ಅವಳಿಗೆ ಮುಳುವಾಗಿದೆ. ಆಸ್ಪತ್ರೆಗೆ ದಾಖಲಾಗಿ ರಕ್ತ ಪರೀಕ್ಷೆ ಹಾಗೂ ಇಸಿಜಿ ನಡೆಸಿದಾಗ ಬೀನ್ಸ್, ಮೊಟ್ಟೆ ಹಾಗೂ ಬಾಳೆಹಣ್ಣಿನ ಪದಾರ್ಥ ಹೆಚ್ಚಾಗಿ ಸೇವನೆ ಮಾಡಿರುವುದರಿಂದ ಈ ತೊಂದರೆ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತನ್ನ ಮಾರಾಟದ ಕುರಿತು ಖುದ್ದು ಈ ನಟಿಯೇ ಹೇಳಿದ್ದು ಅದರ ವಿಡಿಯೋ ಇಲ್ಲಿದೆ ನೋಡಿ: