More

    ನಾನೇಕೆ ಹಿಂದೂ ಧರ್ಮದಿಂದ ಮತಾಂತರಗೊಂಡೆ? ರಹಸ್ಯ ಬಿಚ್ಚಿಟ್ಟ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌

    ಮುಂಬೈ: ವಿಶ್ವಖ್ಯಾತಿ ಗಳಿಸಿರುವ ಕೆಲವೇ ಕೆಲವು ಸಂಗೀತ ನಿರ್ದೇಶಕ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಎ.ಆರ್‌.ರೆಹಮಾನ್‌ ಹೆಸರು ಕೇಳದವರೇ ಇಲ್ಲ ಎನ್ನಬಹುದೇನೋ. ಇವರ ಸುಮಧುರ ಕಂಠಕ್ಕೆ ಮಾರುಹೋದವರೆ ಎಲ್ಲಾ. ಆದರೆ ಇವರ ಬಗ್ಗೆ ಬಹುತೇಕರಿಗೆ ತಿಳಿಯದ ರಹಸ್ಯವೊಂದಿದೆ. ಅದೇನೆಂದರೆ ಎ.ಆರ್‌.ರೆಹಮಾನ್‌ ಅವರ ಮೂಲ ಹೆಸರು ದಿಲೀಪ್‌ ಕುಮಾರ್‌! ಜ.6ರಂದು 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರೆಹಮಾನ್‌ ಅವರ ಜೀವನದ ರಹಸ್ಯವಿದು.

    ರೆಹಮಾನ್‌ ಅವರ ಮೂಲತಃ ಹಿಂದೂ ಧರ್ಮಿಯರು. ಅವರ ಅಪ್ಪ, ಅಜ್ಜ, ಮುತ್ತಾತ  ಹಿಂದೂ ಧರ್ಮೀಯರು. ಆದರೆ ದಿಲೀಪ್‌ ಕುಮಾರ್‌ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಎ.ಆರ್‌.ರೆಹಮಾನ್‌ ಆಗಿ ಮುಸ್ಲಿಂ ಯುವತಿಯನ್ನೇ ಮದುವೆಯಾಗಿ ಇದೀಗ ಮುಸ್ಲಿಂ ಯುವಕನ ಜತೆ ಮಗಳ ನಿಶ್ಚಿತಾರ್ಥವನ್ನು ಮಾಡಿದ್ದಾರೆ.

    ಎ.ಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ಅವರಿಗೆ ಮೂವರು ಮಕ್ಕಳಿದ್ದಾರೆ. ಖತೀಜಾ, ರಹೀಮಾ ಮತ್ತು ಎಆರ್ ಅಮೀನ್. ಖತೀಜಾ ತಮಿಳು ಚಲನಚಿತ್ರಗಳ ಹಿನ್ನೆಲೆ ಗಾಯಕಿಯಾಗಿದ್ದು ಪ್ರಸಿದ್ಧಿ ಪಡೆದಿದ್ದಾರೆ. ಇವರ ನಿಶ್ಚಿತಾರ್ಥವು ಆಡಿಯೊ ಇಂಜಿನಿಯರ್ ರಿಯಾಸ್ದಿನ್ ಅವರೊಂದಿಗೆ ನಡೆದಿದ್ದು, ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಡಿಸೆಂಬರ್ 29ರಂದು ನನ್ನ ಹುಟ್ಟುಹಬ್ಬದಂದೇ ಸರ್ವಶಕ್ತ ಅಲ್ಹಾನ ಆಶೀರ್ವಾದದಿಂದ, ಎರಡೂ ಕುಟುಂಬಗಳು ಮತ್ತು ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆ’ ಎಂದು ಬರೆದಿದ್ದಾರೆ.

    ಮತಾಂತರಗೊಂಡಿದ್ದೇಕೆ?
    ದಿಲೀಪ್‌ ಕುಮಾರ್‌ ಆಗಿದ್ದವರು ಎ.ಆರ್‌.ರೆಹಮಾನ್‌ ಆಗಿದ್ದೇಕೆ? ಹಿಂದೂ ಧರ್ಮದಿಂದ ದಿಲೀಪ್‌ ಮುಸ್ಲಿಂ ಧರ್ಮವನ್ನು ಅಪ್ಪಿಕೊಂಡದ್ದೇಕೆ? ಹೀಗೆ ಮತಾಂತರಗೊಂಡಿರುವ ಹಿಂದೆ ಬಹು ಕುತೂಹಲದ ಕಾರಣವೊಂದಿದೆ. ಅದೇನೆಂದರೆ, ರೆಹಮಾನ್‌ ಅವರ ತಂದೆ ಹಿಂದೂಗಳಾಗಿದ್ದು, ಬಹಳ ದೈವಭಕ್ತರಾಗಿದ್ದರು. ದಿಲೀಪ್‌ ಕುಮಾರ್‌ (ರೆಹಮಾನ್‌) ಅವರು ಚಿಕ್ಕವರಿರುವಾಗಲೇ ಅವರ ತಂದೆ ಮತ್ತು ಅಕ್ಕ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ತೀರಾ ಬಡತನದಲ್ಲಿದ್ದ ಈ ಕುಟುಂಬದವರು ತಮಗೆ ದೇವರುಮಾತ್ರ ಕೈಹಿಡಿಯಲು ಸಾಧ್ಯ ಎಂದು ನಂಬಿದ್ದರು. ಆದರೆ ಅನಾರೋಗ್ಯ ವಿಪರೀತವಾಗಿ ದಿಲೀಪ್‌ ಕುಮಾರ್‌ ತಂದೆ ತೀರಿಕೊಂಡರು. ಅಕ್ಕ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು.

    AR Rahman's Daughter, Khatija Announces Her Engagement, Shares A Picture From The Intimate Ceremony

    ತಂದೆಯ ಸಾವಿನ ಬಳಿಕ ದಿಲೀಪ್‌ ಕುಮಾರ್‌ ಕುಟುಂಬ ಅಕ್ಷರಶಃ ನಲುಗಿ ಹೋಯಿತು. ತೀರಾ ಚಿಕ್ಕವಯಸ್ಸಿನವರಾದ ದಿಲೀಪ್‌ ಕುಮಾರ್‌ ಅವರಿಗೆ ದೇವರ ಮೇಲೆಯೇ ನಂಬಿಕೆ ಹೊರಟುಹೋಯಿತಂತೆ. ತಮ್ಮ ತಂದೆಯ ಸಾವಿಗೆ ದೇವರೇ ಹೊಣೆ ಎಂದು ಅಂದುಕೊಂಡರು. ಅಕ್ಕನ ಬದುಕಿಸುವ ಪ್ರಯತ್ನದಲ್ಲಿ ಇರುವಾಗಲೇ ಅವರಿಗೆ ಸಿಕ್ಕಿದ್ದು ಸೂಫಿ. ಅಕ್ಕನ ಜೀವವನ್ನು ತಾವು ಉಳಿಸುವುದಾಗಿ ಹೇಳಿಕೊಂಡ ಸೂಫಿ ಪುಟ್ಟ ಬಾಲಕ ದಿಲೀಪ್‌ ಕುಮಾರನಿಗೆ ‘ಬುದ್ಧಿ’ ಹೇಳಿದರು. ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರೆ ಅಕ್ಕಳನ್ನು ಬದುಕಿಸಬಹುದು ಎಂದರು. ನಂತರ ಇಡೀ ಕುಟುಂಬ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿತು. (ಅವರ ಅಕ್ಕನಿಗೆ ನಂತರ ಏನಾಯಿತು ಎಂಬ ಮಾಹಿತಿ ವಿವರಿಸಲಿಲ್ಲ). ಅಲ್ಲಿಂದ ದಿಲೀಪ್‌ ಕುಮಾರ್‌ ಅಲ್ಲಾಹ್‌ ರಕ್ಖಾ ರೆಹಮಾನ್ (ಎ.ಆರ್‌.ರೆಹಮಾನ್‌) ಆದರು.

    ಅವರ ಮಗಳ ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಹಾಗೂ ಅವರ ಹುಟ್ಟುಹಬ್ಬದ ನಿಮಿತ್ತ ತಮ್ಮ ಜೀವನದ ಕುರಿತು ಮಾಧ್ಯಮವೊಂದಕ್ಕೆ ನೀಡಿದ ಈ ಸಂದರ್ಶನ ವೈರಲ್‌ ಆಗುತ್ತಿದೆ.

    10 ರಿಂದ 12ನೇ ತರಗತಿ ಹೊರತುಪಡಿಸಿ ಉಳಿದ ತರಗತಿಗಳು ಆನ್‌ಲೈನ್‌ನಲ್ಲಿ- ನೈಟ್‌ ಕರ್ಫ್ಯೂ ಮುಂದುವರಿಕೆ

    ಫುಲ್‌ಟೈಟ್‌ ಆಗಿ ವಿಮಾನನಿಲ್ದಾಣದೊಳಗೇ ಮೂತ್ರ ಮಾಡಿದ ಶಾರುಖ್‌ ಪುತ್ರ ಆರ್ಯನ್‌! ಏನಿದರ ಅಸಲಿಯತ್ತು?

    10 ರಿಂದ 12ನೇ ತರಗತಿ ಹೊರತುಪಡಿಸಿ ಉಳಿದ ತರಗತಿಗಳು ಆನ್‌ಲೈನ್‌ನಲ್ಲಿ- ನೈಟ್‌ ಕರ್ಫ್ಯೂ ಮುಂದುವರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts