ಕೆಆರ್‌ಎಸ್‌ನಲ್ಲಿ ಸೆಲ್ಫೀ ತೆಗೆಯಲು ಹೋಗಿ ನದಿಗೆ ಬಿದ್ದ ಪತ್ನಿ- ಆಕೆಯ ರಕ್ಷಿಸಲು ಹಾರಿದ ಪತಿ!

KRS
Published on

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಡ್ಯಾಮ್‌ ಮೇಲೆ ನಿಂತು ಸೆಲ್ಫಿ ತೆಗೆಯಲು ಹೋಗಿ ಮಹಿಳೆಯೊಬ್ಬರು ನದಿಗೆ ಬಿದ್ದ ಘಟನೆ ನಡೆದಿದೆ. ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ನದಿಗೆ ಹಾರಿದ್ದಾರೆ.

ಕೆಆರ್‌ಎಸ್‌ನ ಕೆಳ ಸೇತುವೆ ಮೇಲೆ ನಿಂತ ಮೈಸೂರಿನ ಕೂರ್ಗಳ್ಳಿ ನಿವಾಸಿ ಆಶಾ ಸೆಲ್ಫಿ ತೆಗೆಯಲು ಹೋಗಿದ್ದರು. ಈ ವೇಳೆ ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಪತಿ ಗಣೇಶ್ ಜೊತೆಗೆ ಡ್ಯಾಂ ವೀಕ್ಷಣೆಗೆ ಇವರು ಆಗಮಿಸಿದ್ದರು. ಪತ್ನಿಯನ್ನ ರಕ್ಷಿಸಲು ನದಿಗೆ ಹಾರಿದರು ಪತಿ ಗಣೇಶ್.

ಆದರೆ ಇಬ್ಬರ ಅದೃಷ್ಟ ಚೆನ್ನಾಗಿತ್ತು. ಇಬ್ಬರೂ ಹಾರಿದ್ದನ್ನು ಅಲ್ಲಿದ್ದ ಮೀನುಗಾರರು ನೋಡಿ ಇಬ್ಬರನ್ನೂ ರಕ್ಷಿಸಿದ್ದಾರೆ. ಸುಮಾರು 50 ಅಡಿ ಕೆಳಗೆ ಬಿದ್ದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಮೀನುಗಾರರು ಇಲ್ಲದಿದ್ದರೆ ಸ್ಥಿತಿ ಏನಾಗುತ್ತಿತ್ತೋ ತಿಳಿಯದು.

ಇಂಥ ಘಟನೆಗಳು ಮರುಕಳಿಸುತ್ತಿದ್ದರೂ ಜನರಿಗೆ ಮಾತ್ರ ಸೆಲ್ಫಿಯ ಹುಚ್ಚು ಹೋದಂತೆ ಕಾಣುತ್ತಿಲ್ಲ ಎಂದು ಜನಸಾಮಾನ್ಯರು ಹೇಳಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net