ಕೇರಳದಲ್ಲಿ ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದ ಫಲಿತಾಂಶ- ಸೋಲಿನ ಅಂಚಿನಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ

metroman
Published on

ತಿರುವನಂತಪುರ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಮೆಟ್ರೋ ಮ್ಯಾನ್‌ ಇ. ಶ್ರೀಧರನ್‌ ಅವರು ಇಲ್ಲಿಯವರೆಗೂ ಭಾರಿ ಮುನ್ನಡೆ ಸಾಧಿಸಿಕೊಂಡು ಬಂದಿದ್ದು, ಇದೀಗ ಇನ್ನೇನು ಅಂತಿಮ ಹಂತದಲ್ಲಿ ಇರುವಾಗ ಹಿನ್ನಡೆ ಅನುಭವಿಸಿದ್ದಾರೆ.

ಕೇರಳ ವಿಧಾನಸಭೆಯ 140 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶದಲ್ಲಿ ಪಾಲಕ್ಕಾಡ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದ 'ಮೆಟ್ರೋ ಮ್ಯಾನ್' ಇ ಶ್ರೀಧರನ್ ಕೊನೆಯ ಕ್ಷಣದವರೆಗೂ ಯುಡಿಎಫ್ ಅಭ್ಯರ್ಥಿ ಶಫಿ ಪರಂಬಿಲ್ ಅವರಿಗಿಂತಲೂ ಎರಡು ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದರು.

ಆದರೆ ದಿಢೀರ್‌ ಬೆಳವಣಿಗೆಯಲ್ಲಿ ಶಫಿ ಅವರು ಮುನ್ನಡೆ ಸಾಧಿಸಿದ್ದಾರೆ. ಯುಡಿಎಫ್ ಅಭ್ಯರ್ಥಿ 1200ಕ್ಕೂ ಅಧಿಕ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಶ್ರೀಧರನ್‌ ಅವರ ಸೋಲು ಬಹುತೇಕ ಖಚಿತವಾಗಿದೆ. ಅಂಚೆ ಮತಪತ್ರದ ಎಲ್ಲಾ ವೋಟುಗಳು ಶ್ರೀಧರನ್‌ ಪರವಾಗಿ ಬಂದರೂ, ಅವರು ಗೆಲ್ಲುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net