ವರ್ಕೌಟ್​ಗೆ ಇನ್ನೊಂದು ಬಲಿ: ಚಿತ್ರರಂಗಕ್ಕೆ ಶಾಕ್​- ಜ್ಯೂನಿಯರ್​ ಸಲ್ಮಾನ್​ ಖಾನ್​ ಖ್ಯಾತಿಯ ನಟ ಇನ್ನಿಲ್ಲ

salmankhan
Published on

ಮುಂಬೈ: ಜಿಮ್​ನಲ್ಲಿ ವರ್ಕೌಟ್​ ಮಾಡುವ ವೇಳೆ ಚಿಕ್ಕವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಸಾಗಿದೆ. ನಟ ಪುನೀತ್​ ರಾಜ್​ಕುಮಾರ್​ ಅವರ ನಿಧನದ ಬಳಿಕ ಅತಿಯಾದ ವರ್ಕೌಟ್​ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವ ನಡುವೆಯೇ ಹದಿಹರೆಯದವರು ಜೀವ ಕಳೆದುಕೊಳ್ಳುತ್ತಿದ್ದಾರೆ.

ಇದೀಗ ಅವರ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದ್ದಾರೆ ಸಾಗರ್ ಪಾಂಡೆ. ಜ್ಯೂನಿಯರ್​ ಸಲ್ಮಾನ್​ ಖಾನ್​ ಎಂದೇ ಪ್ರಸಿದ್ಧಿ ಪಡೆದಿರುವ ಸಾಗರ್​ ಪಾಂಡೆ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯ ಸ್ತಂಭನವಾಗಿ ಪ್ರಾಣ ಬಿಟ್ಟಿದ್ದಾರೆ. ಇವರಿಗೆ 50 ವರ್ಷ ವಯಸ್ಸಾಗಿತ್ತು.

ಸಾಗರ್​ ಪಾಂಡೆ ಅವರು, ಸಲ್ಮಾನ್ ಖಾನ್ ಅವರ ಸಿನಿಮಾಗಳಲ್ಲಿ ಡೂಪ್ ಆಗಿ ಅಭಿನಯಿಸುತ್ತಿದ್ದರು. ಭಜರಂಗಿ ಭಾಯಿಜಾನ್‌ ಸಿನಿಮಾ ಸೇರಿದಂತೆ ಸುಮಾರು 50 ಸಿನಿಮಾಗಳಲ್ಲಿ ಡೂಪ್ ಆಗಿದ್ದರು.

ಜಿಮ್‌ನಲ್ಲಿ ವರ್ಕೌಟ್​ ಮಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಮುಂಬೈನ ಜೋಗೇಶ್ವರಿ ಪೂರ್ವದಲ್ಲಿರುವ ಹಿಂದೂ ಹೃದಯ್ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಟ್ರಾಮಾ ಕೇರ್ ಮುನ್ಸಿಪಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದರು.

ಇವರ ಸಾವಿನ ಕುರಿತು ಹಲವರು ಸಂತಾಪ ಸೂಚಿಸಿದ್ದಾರೆ. ಕಬೀರ್ ಖಾನ್ ನಿರ್ದೇಶನದ 2015ರ ಭಜರಂಗಿ ಭಾಯಿಜಾನ್ ಸೆಟ್‌ನ ಥ್ರೋಬ್ಯಾಕ್ ಚಿತ್ರವನ್ನು ಸಲ್ಮಾನ್ ಹಂಚಿಕೊಂಡು ರೆಸ್ಟ್ ಇನ್ ಪೀಸ್ ಎಂದು ಸಂತಾಪ ಸೂಚಿಸಿದ್ದಾರೆ. ಸಾಗರ್ ಪಾಂಡೆ ಅವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ವರ್ಕೌಟ್​ ಮಾಡುವಾಗ ಹೃದಯಸ್ತಂಭನವಾಗಿ  ಸ್ಟ್ಯಾಂಡ್-ಅಪ್​ ಕಾಮಿಡಿಯನ್​ ಹಾಗೂ ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ಮೃತಪಟ್ಟಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net