ಡಿಜಿಟಲ್‌ ವಿಭಾಗದಲ್ಲಿ ಅನುಭವವಿದೆಯೆ? ಬರೋಡಾ ಬ್ಯಾಂಕ್‌ನಲ್ಲಿದೆ ಅವಕಾಶ: 90 ಸಾವಿರ ರೂ.ವರೆಗೆ ಸಂಬಳ

bank of baroda
Published on

ಬ್ಯಾಂಕ್​ ಆಫ್​ ಬರೋಡಾದ ರಿಸ್ಕ್​ ಮ್ಯಾನೇಜ್​ಮೆಂಟ್​ ಆ್ಯಂಡ್​ ಫ್ರಾಡ್​ ರಿಸ್ಕ್​ ಮ್ಯಾನೇಜ್​ಮೆಂಟ್​ ವಿಭಾಗದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಡಿಜಿಟಲ್​ ವಿಭಾಗದಲ್ಲಿ ಅನುಭವವುಳ್ಳ ಸೂಕ್ತ ಅಭ್ಯರ್ಥಿಗಳು ಹಾಗೂ ಎಂಎಸ್​ಎಂಇ ಕ್ರೆಡಿಟ್​ ಅಧಿಕಾರಿಗಳ ನೇಮಕಕ್ಕೆ ಆದ್ಯತೆ ನೀಡಲಾಗಿದೆ. 1 ವರ್ಷ ಪ್ರೊಬೆಷನರಿ ಅವಧಿ ಇರುತ್ತದೆ. ಆನ್​ಲೈನ್​ ಅರ್ಜಿಗಳಿಗೆ ಮಾತ್ರ ಅವಕಾಶವಿದೆ. ದೇಶದ ಯಾವುದೇ ಭಾಗದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಅಲ್ಲಿಸುವಂತೆ ಸೂಚಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಸಂಸ್ಥೆಯಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸುವುದಾಗಿ 1.5 ಲಕ್ಷ ರೂ.ನ ಸೇವಾ ಬಾಂಡ್​ ಸಲ್ಲಿಸಬೇಕು. ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಹುದ್ದೆ ವಿವರ

* ಮ್ಯಾನೇಜರ್​ (ಡಿಜಿಟಲ್​ ವಂಚನೆ ವಿಭಾಗ)- 15

* ಕ್ರೆಡಿಟ್​ ಆಫೀಸರ್​ (ಎಂಎಸ್​ಎಂಇ ವಿಭಾಗ)- 40

* ಕ್ರೆಡಿಟ್​ ಎಕ್ಸ್​ಪೋರ್ಟ್​/ ಇಂಪೋರ್ಟ್​ ಬಿಜಿನೆಸ್​-20

* ಫೋರೆಕ್ಸ್​ ಅಕ್ವಿಜಿಷನ್​ ಆ್ಯಂಡ್​ ರಿಲೇಷನ್​ಷಿಪ್​ ಮ್ಯಾನೇಜರ್​ (ಕಾರ್ಪೊರೇಟ್​ ಕ್ರೆಡಿಟ್​ ವಿಭಾಗ)-30

ಶೈಕ್ಷಣಿಕ ಅರ್ಹತೆ: ಯಾವುದೇ ಪದವಿ, ಬಿ.ಇ, ಬಿ.ಟೆಕ್​ (ಕಂಪ್ಯೂಟರ್​ ಸೈನ್ಸ್​)/ಐಟಿ/ ಡೇಟಾ ಸರ್ವಿಸ್​ ಅಥವಾ ವಿಜ್ಞಾನ ವಿಭಾಗದಲ್ಲಿ ತತ್ಸಮಾನ ಪದವಿ ಬಿಎಸ್ಸಿ, ಬಿಸಿಎ, ಎಂಸಿಎ, ಸ್ನಾತಕೋತ್ತರ ಪದವಿ/ಮ್ಯಾನೇಜ್​ಮೆಂಟ್​ನಲ್ಲಿ ಡಿಪ್ಲೊಮಾ, ಸಿಎ/ಸಿಎಂಎ/ಸಿಎಫ್​ಎ ಪದವಿ ಹೊಂದಿದವರಿಗೆ ಆದ್ಯತೆ. ಹುದ್ದೆಗಳಿಗೆ ಅನುಗುಣವಾಗಿ 2-3 ವರ್ಷ ವೃತ್ತಿ ಅನುಭವ ಕೇಳಲಾಗಿದೆ.

ವೇತನ: ಕನಿಷ್ಠ 48,170 ರೂ.ಗಳಿಂದ ಗರಿಷ್ಠ 89,890 ರೂ.ವರೆಗೆ ನಿಗದಿ

ವಯೋಮಿತಿ: ಹುದ್ದೆಗೆ ಅನುಗುಣವಾಗಿ ಕನಿಷ್ಠ 24 ರಿಂದ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ನೀಡಲಾಗುವುದು.

ಅರ್ಜಿ ಶುಲ್ಕ: ಎಸ್​ಸಿ/ಎಸ್​ಟಿ , ಅಂಗವಿಕಲ, ಮಹಿಳಾ ಅಭ್ಯರ್ಥಿಗಳಿಗೆ 100 ರೂ. ಹಾಗೂ ಇತರೆ ವರ್ಗದವರಿಗೆ 600 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ 24.03.2022

ಅಧಿಸೂಚನೆಗೆ: https://bit.ly/3CqQsGk

ಮಾಹಿತಿಗೆ: http://www.bankofbaroda.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net