

ಹುಬ್ಬಳ್ಳಿ ಕಿಮ್ಸ್ನಿಂದ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನಕರ್ನಾಟಕ ವೈದ್ಯಕಿಯ ಶಿಕ್ಷಣ ಸಂಸ್ಥೆಯಲ್ಲಿ (ಕಿಮ್ಸ್) ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಂದ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಸ್ಟೆನೋಗ್ರ್ಾ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ನಿಯಮದನ್ವಯ ವೇತನ ನೀಡಲಾಗುವುದು ಎಂದು ತಿಳಿಸಲಾಗಿದೆ.
* ಪ್ರೊಫೆಸರ್-2
ಎಂಡೋಕೆನೋಲಜಿ, ರೇಡಿಯೋಥೆರಪಿ ವಿಭಾಗದಲ್ಲಿ ಬೋಧನೆ ಮಾಡಬೇಕಿದ್ದು, ಎಂಬಿಬಿಎಸ್ ಪದವಿ ಪಡೆಯುವುದರ ಜತೆಗೆ ವೃತ್ತಿ ಅನುಭವ ಅವಶ್ಯ. ಗರಿಷ್ಠ 55 ವರ್ಷ ವಯೋಮಿತಿ ಇದೆ.
* ಅಸಿಸ್ಟೆಂಟ್ ಪ್ರೊಫೆಸರ್ - 7
ಕಾರ್ಡಿಯೋ ವಸ್ಕುಲರ್, ಥೋರಾಸಿಸ್ ಸರ್ಜರಿ, ಾರೆನ್ಸಿಕ್ ಮೆಡಿಸಿನ್, ಫಿಸಿಕಲ್ ಮೆಡಿಸಿನ್, ರೆಹಾಬಿಲಿಟೇಷನ್, ಓಪ್ತಾಲಮೋಲಾಜಿ, ಕಮ್ಯುನಿಟಿ ಮೆಡಿಸಿನ್, ಜನರಲ್ ಸರ್ಜರಿ ಪ್ಯಾಥೋಲಜಿ ವಿಭಾಗದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಎಂಬಿಬಿಎಸ್ ಪದವಿ ಜತೆಗೆ ವೃತ್ತಿ ಅನುಭವ ಕೇಳಲಾಗಿದೆ. ಗರಿಷ್ಠ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
* ಸ್ಟೆನೋಗ್ರಾಫರ್ (ದರ್ಜೆ 1 ಮತ್ತು 2: ಕನ್ನಡ)- 2
ದ್ವೀತಿಯ ಪಿಯುಸಿ ಉತ್ತೀರ್ಣರಾಗಿದ್ದು, ಕಮರ್ಷಿಯಲ್ ಪ್ರಾಕ್ಟೀಸ್ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ತರಬೇತಿ ಪಡೆದಿರಬೇಕು. ಕನ್ನಡ ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೇ ಉತ್ತೀರ್ಣರಾಗಿರಬೇಕು. ಅರ್ಜಿ ಶುಲ್ಕ 500 ರೂ. ಪಾವತಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೇ ದಿನ: 29-03-2022
ಅಧಿಸೂಚನೆಗೆ: https://bit.ly/3CNcaV4
ಮಾಹಿತಿಗೆ: https://bit.ly/3u3EuP0