ಮೂರು ವರ್ಷಗಳ ಹಿಂದೆಯೇ ನಟಿ ಜಯಂತಿ ವಿಚಾರದಲ್ಲಾಗಿತ್ತು ಮಹಾ ಎಡವಟ್ಟು!

jayanthi
Published on

ಬೆಂಗಳೂರು: 2018ರ ಮಾರ್ಚ್​ 27ರಂದು ನಟಿ ಜಯಂತಿ ಅವರ ಕುಟುಂಬಕ್ಕೆ ಭಾರಿ ಆಘಾತದ ವಿಷಯ ಆಗಿತ್ತು. ಅದೇನೆಂದರೆ, ಜಯಂತಿಯವರು ಮೃತಪಟ್ಟಿರುವುದಾಗಿ ಎಲ್ಲೆಡೆ ಸುದ್ದಿ ವೈರಲ್​ ಆಗಿತ್ತು.

ಜಾಲತಾಣಗಳಲ್ಲಿಯೂ ಈ ವಿಷಯ ಸುದ್ದಿಯಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಮುಂದುವರೆದಾಗಲೇ ಈ ಸುದ್ದಿಯಾಗಿಹೋಗಿತ್ತು.

ಟ್ವಿಟರ್​ ತುಂಬೆಲ್ಲಾ ಅಭಿಮಾನಿಗಳು ಸಂತಾಪ ಸೂಚಕವನ್ನು ಸಲ್ಲಿಸಲು ಶುರು ಮಾಡಿದ್ದರು. ಜಯಂತಿಯವರು ಚೆನ್ನಾಗಿದ್ದಾರೆ, ಅವರ ಪ್ರಾಣಕ್ಕೆ ಏನೂ ಕುತ್ತಾಗಲಿಲ್ಲ ಎಂದು ಅವರ ಕುಟುಂಬಸ್ಥರು ಜನರಿಗೆ ನಂಬಿಸಲು ಅದೆಷ್ಟು ಕಷ್ಟಪಡಬೇಕಾಯಿತು ಎಂದರೆ, ಅವರು ವಿಡಿಯೋ ಮೂಲಕ ನಿಜ ವಿಷಯ ತಿಳಿಸಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಅಭಿಮಾನಿಗಳು ಇರಲಿಲ್ಲ.

ಜಯಂತಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿರುವ ವಿಡಿಯೋಗಳು ನಂತರ ವೈರಲ್​ ಆದ ಬಳಿಕ ಅಭಿಮಾನಿಗಳಿಗೆ ಸಮಾಧಾನವಾಗಿತ್ತು. ನಟಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ನಮ್ಮ ತಾಯಿ ಆಸ್ತಮಾದಿಂದ ಬಳಲುತ್ತಿದ್ದರು. ಅವರು ಪ್ರತಿದಿನ ಇನ್​ಹೇಲರ್​ ಬಳಸುತ್ತಿದ್ದರು. ಅವರ ಅನಾರೋಗ್ಯಕ್ಕೆ ಎಂದಿಗೂ ಆಸ್ಪತ್ರೆಗೆ ದಾಖಲಾಗಲಿಲ್ಲ. ಆದರೆ ಆರೋಗ್ಯವು ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮುಂದಿನ 24 ಗಂಟೆ ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಹೇಳಿ ಎಲ್ಲಾ ಗಾಳಿಸುದ್ದಿಗೆ ತೆರೆ ಎಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net