ನನ್ನ ಜೇಬಲ್ಲಿ ಬಾಂಬ್‌ ಇದೆ... ತಡ್ಕೊಳಿ... ಸದ್ಯ ಗಪ್‌ಚುಪ್‌ ಇದ್ದೇನೆ... ಹೊರಹಾಕಿದ್ರೆ ಅಷ್ಟೇ...

jarakiholi
Published on

ಬೆಂಗಳೂರು: ನನ್ನ ಜೇಬಿನಲ್ಲಿ ಒಂದು ಬಾಂಬ್ ತರಹದ ಹಲವು ದಾಖಲೆಗಳಿವೆ. ಅದನ್ನು ಹೊರಗೆ ಹಾಕಿದರೆ ನಿಮಗೆ ( ಮಾಧ್ಯಮದವರು) ಶಾಕ್ ಆಗುತ್ತದೆ. ಹಲವರ ಬಣ್ಣ ಬಯಲಾಗುತ್ತದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ನಾವು ಎವಿಡೆನ್ಸ್ ಸಂಗ್ರಹಿಸಿದ್ದೇವೆ. ಹೊರಗೆ ಹೆಚ್ಚು ಮಾತನಾಡಬಾರದು ಎಂಬ ವಕೀಲರ ಸಲಹೆ ಪಾಲಿಸುತ್ತೇವೆ. ಕಾನೂನು ಹೋರಾಟ ಮಾಡುತ್ತೇವೆ ಎಂದರು.

ಯುವತಿ ಎರಡನೇ ವಿಡಿಯೋ ಬಿಡುಗಡೆ ಮಾಡಿದ್ದರ ಬಗ್ಗೆ ಜಾರಕಿಹೊಳಿ ಪ್ರತಿಕ್ರಿಯಿಸಿ, ನಾನು ಮೊದಲಿನಿಂದಲೂ ಹೇಳುತ್ತಿರುವೆ. ಇದೊಂದು ಹೈಪ್ರೊಫೈಲ್ ಷಡ್ಯಂತ್ರ.

ನಾನು ದೂರು ದಾಖಲಿಸಿದ ನಂತರ ಯುವತಿಯ ಮೊದಲ ವಿಡಿಯೋ ಹೊರಬಂತು, ಇದೀಗ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ಒಂದಲ್ಲ, ಇಂತಹ‌ 10 ವಿಡಿಯೋ ಬರಲಿ ಹೆದರುವುದಿಲ್ಲ. ಅಕೆ ಯಾರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಗೊತ್ತಾಗಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net