ಬ್ಯಾಂಕ್‌ನಲ್ಲಿ ಕೆಲಸ ಇದೆಯಾ? ಬೇಗ ಬೇಗ ಮುಗಿಸಿಕೊಳ್ಳಿ: ಶುರುವಾಗಲಿದೆ ಸರಣಿ ರಜೆ...

bank
Published on

ನವದೆಹಲಿ: ಬಹುತೇಕ ಮಂದಿಗೆ ಒಂದಲ್ಲೊಂದು ಕಾರಣದಿಂದ ಬ್ಯಾಂಕ್‌ಗಳಲ್ಲಿ ಕೆಲಸ ಇದ್ದೇ ಇರುತ್ತದೆ. ಕೆಲವೊಮ್ಮೆ ತುರ್ತಾಗಿ ನಡೆಯಬೇಕಾಗಿರುವ ಕೆಲಸಗಳು ಇರುತ್ತವೆ. ಅಂಥ ಕೆಲಸಗಳು ಇದ್ದರೆ ಇಂದು (25) ಮತ್ತು ನಾಳೆಯ (26) ಒಳಗೇ ಮುಗಿಸಿಕೊಂಡು ಬಿಡಿ.

ಏಕೆಂದರೆ 27ರಿಂದ ಬ್ಯಾಂಕ್‌ಗಳಿಗೆ ಸರಣಿ ರಜೆ ಇದೆ. ಈ ಎರಡು ದಿನಗಳಲ್ಲಿ ಅಗತ್ಯ ಬ್ಯಾಂಕ್ ವ್ಯವಹಾರಗಳನ್ನು ಮಾಡಿಕೊಳ್ಳದಿದ್ದರೆ, ನೀವು ಮುಂದಿನ ವಾರದ ತನಕ ಕಾಯಬೇಕಾಗುತ್ತದೆ. ನಡುವೆ ಅಂದರೆ ಮಾರ್ಚ್ 29, 30 ಮತ್ತು ಏಪ್ರಿಲ್ 3 ರಂದು ಬ್ಯಾಂಕ್‌ಗಳಲ್ಲಿ ಗ್ರಾಹಕರ ಸೇವೆ ಇರುತ್ತದೆ. ಈ ನಡುವೆ ಸಾಕಷ್ಟು ರಜೆ ಇರುವ ಕಾರಣ, ಕೊನೆ ಕ್ಷಣದ ರಶ್‌ ತಪ್ಪಿಸಲು ಬ್ಯಾಂಕ್‌ ವ್ಯವಹಾರ ಬೇಗ ಮುಗಿಸಿಕೊಳ್ಳಿ

ಬ್ಯಾಂಕ್ ರಜಾದಿನಗಳು

ಮಾರ್ಚ್ 27 – ನಾಲ್ಕನೇ ಶನಿವಾರ

ಮಾರ್ಚ್ 28 – ಭಾನುವಾರ

ಮಾರ್ಚ್ 31 - ಆರ್ಥಿಕ ವರ್ಷದ ಕೊನೆಯ ದಿನವಾಗಿರುವುದರಿಂದ ಬ್ಯಾಂಕಿಗೆ ರಜೆ ಇಲ್ಲದಿದ್ದರೂ, ಗ್ರಾಹಕರ ಸೇವೆ ಬ್ಯಾಂಕಿನಲ್ಲಿ ಇರುವುದಿಲ್ಲ.

ಏಪ್ರಿಲ್ 1 – ಬ್ಯಾಂಕಿನ ವಾರ್ಷಿಕ ಖಾತೆಯ ಮುಕ್ತಾಯ ವರ್ಷ

ಏಪ್ರಿಲ್ 2 – ಗುಡ್ ಫ್ರೈಡೆ

ಏಪ್ರಿಲ್ 4 – ಭಾನುವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net