ದಾಖಲೆ ಚಿತ್ರ ‘ಜೇಮ್ಸ್‌’ ಬಿಡುಗಡೆಗೆ ಮುನ್ನವೇ ಪ್ರಾಣಪಕ್ಷಿ ಹಾರೋಯ್ತು! ವಿಭಿನ್ನ ಗೆಟಪ್‌ಗೆ ಎಕ್ಸ್‌ಟ್ರಾ ವರ್ಕ್‌ಔಟ್‌ ಮಾಡಿದ್ರಾ ಅಪ್ಪು?

James
Published on

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರು ಈ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಮೃತಪಡಲು ಅವರು ಜಿಮ್‌ನಲ್ಲಿ ಸದಾ ಹೆಚ್ಚು ಕಳೆಯುತ್ತಿದುದು ಹಾಗೂ ಬಾಡಿಬಿಲ್ಡ್‌ಗಾಗಿ ಹೆಚ್ಚಿನ ರೀತಿಯಲ್ಲಿ ವರ್ಕ್‌ಔಟ್‌ ಮಾಡುತ್ತಿದ್ದುದೇ ಕಾರಣ ಎನ್ನುವ ಮಾತೂ ಇದೆ.

ಇದರ ನಡುವೆಯೇ ಬಹು ನಿರೀಕ್ಷಿತ ಜೇಮ್ಸ್‌ ಚಿತ್ರಕ್ಕಾಗಿ ಪುನೀತ್‌ ಸಾಕಷ್ಟು ತಯಾರಿ ನಡೆಸಿದ್ದರು. ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲು ಹೊರಟಿದ್ದರು. ಇದರ ಬಹುತೇಕ ಶೂಟಿಂಗ್‌ ಮುಗಿದಿದೆ. ಕಾಲಿವುಡ್‌ ನಟಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಲಿದ್ದರು. ಕೆಲವೊಂದು ಹಾಡುಗಳ ಶೂಟಿಂಗ್‌ ಮಾತ್ರ ಬಾಕಿ ಇತ್ತು. ಅದನ್ನು ಮಂಗಳೂರು ಮತ್ತು ವಿದೇಶಗಳಲ್ಲಿ ಶೂಟಿಂಗ್‌ ಮಾಡಲು ತಯಾರಿ ನಡೆಸಲಾಗಿತ್ತು.

ವಿಶೇಷ ಎಂದರೆ ಈ ಚಿತ್ರ ಪುನೀತ್‌ ರಾಜ್‌ಕುಮಾರ್‌ ಅವರ ಚಿತ್ರರಂಗ ಜೀವನದ ದಾಖಲೆ ಚಿತ್ರ ಎನ್ನಲಾಗಿದೆ. ಏಕೆಂದರೆ ಚಿತ್ರದ ಸೆಟಲೈಟ್ ಹಕ್ಕುಗಳು 15 ಕೋಟಿಗೆ ಮಾರಾಟವಾಗಿವೆ ಎನ್ನಲಾಗಿದ್ದು, ಇದು ಇದುವರೆಗೆ ಮಾರಾಟವಾದ ಪುನೀತ್ ಅವರ ಚಿತ್ರಗಳಲ್ಲೇ ಇದು ಅತ್ಯಧಿಕ ಮೊತ್ತ ಎಂದು ಹೇಳಲಾಗುತ್ತಿದೆ.

ಇದರಲ್ಲಿನ ಒಂದು ಹಾಡಿಗಾಗಿ ಪುನೀತ್‌ ಅವರು ಎಕ್ಸ್‌ಟ್ರಾ ವರ್ಕ್‌ಔಟ್‌ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತಮ್ಮ ದೇಹವನ್ನು ಆ ಹಾಡಿಗೆ ಸೆಟ್‌ ಮಾಡುವ ನಿಟ್ಟಿನಲ್ಲಿ ಪ್ರತಿದಿನಕ್ಕಿಂತ ಹೆಚ್ಚಿನ ಸಮಯವನ್ನು ಜಿಮ್‌ನಲ್ಲಿ ಕಳೆಯುತ್ತಿದ್ದರು. ಇದರಿಂದಾಗಿ ಅವರಿಗೆ ಹೃದಯದ ಸಮಸ್ಯೆ ಉಂಟಾಗಿರುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.

ಈ ನಡುವೆಯೇ 'ಜೇಮ್ಸ್‌' ಚಿತ್ರದ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದರಲ್ಲಿ ಪುನೀತ್ ವಿದೇಶಿ ಹುಡುಗಿಯರ ಜತೆ ಇರುವುದನ್ನು ನೋಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net