

S Jaishankar: ಮೂರು ದಿನಗಳ ರಷ್ಯಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಗುರುವಾರ (ಆಗಸ್ಟ್ 21) ಮಾಸ್ಕೋದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದರು.
ಈ ಭೇಟಿ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುವತ್ತ ಗಮನಹರಿಸಿದೆ ಎಂದು ತಿಳಿದುಬಂದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಧಿಕ ಸುಂಕ ವಿಧಿಸಿರುವ ಕ್ರಮದಿಂದ ಮೋದಿ ಸರ್ಕಾರವು ರಷ್ಯಾದೊಂದಿಗಿನ ತನ್ನ ಸಂಬಂಧಗಳನ್ನು ವೃದ್ದಿಸಿಕೊಳ್ಳುತ್ತಿದೆ.
ರಷ್ಯಾದ ಉಪ ಪ್ರಧಾನ ಮಂತ್ರಿ ಡೆನಿಸ್ ಮಾಂಟುರೊವ್ ಅವರೊಂದಿಗಿನ ವ್ಯಾಪಾರ ಮತ್ತು ಆರ್ಥಿಕ ಮಾತುಕತೆಯ ನಂತರ ಮಾಸ್ಕೋಗೆ ಆಗಮಿಸಿದ ಜೈಶಂಕರ್, ಲಾವ್ರೊವ್ ಅವರೊಂದಿಗಿನ ಭೇಟಿಯು ರಾಜಕೀಯ ಸಂಬಂಧ ಮತ್ತು ದ್ವಿಪಕ್ಷೀಯ ಸಹಕಾರ ಎರಡನ್ನೂ ಪರಿಶೀಲಿಸಲು ಒಂದು ಅವಕಾಶವಾಗಿದೆ ಎಂದು ಹೇಳಿದರು. ಮಾಸ್ಕೋ ಜೊತೆಗಿನ ವ್ಯಾಪಾರವನ್ನು ಬಲಪಡಿಸಲು ಜೈಶಂಕರ್ ಒತ್ತಾಯಿಸಿದರು ಎಂದು ತಿಳಿದುಬಂದಿದೆ.
ಮಾಸ್ಕೋದಲ್ಲಿ ಮಾತನಾಡಿದ ಜೈಶಂಕರ್, ಎರಡೂ ದೇಶಗಳು ತಮ್ಮ ವ್ಯಾಪಾರ ಬುಟ್ಟಿಯನ್ನು ವೈವಿಧ್ಯಗೊಳಿಸಬೇಕು ಮತ್ತು ಜಂಟಿ ಉದ್ಯಮಗಳನ್ನು ವಿಸ್ತರಿಸಬೇಕು ಎಂದು ಹೇಳಿದರು. ಹೆಚ್ಚು ಕೆಲಸ ಮಾಡುವುದು ಮತ್ತು ಅದನ್ನು ವಿಭಿನ್ನವಾಗಿ ಮಾಡುವುದು ನಮ್ಮ ಮಂತ್ರವಾಗಿರಬೇಕು ಎಂದರು.
ಇದನ್ನೂ ಓದಿ:ಕಾಲಕಾಲಕ್ಕೆ ಲಸಿಕೆ ಪಡೆಯುವುದು ಅವಶ್ಯಕ
ಸುಂಕ ಹೆಚ್ಚಳ ಸೇರಿದಂತೆ ಇನ್ನಿತರ ಅಡೆತಡೆಗಳು, ಲಾಜಿಸ್ಟಿಕ್ಸ್‌ನಲ್ಲಿನ ಅಡಚಣೆಗಳನ್ನು ತೆಗೆದುಹಾಕುವುದು, ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್, ಉತ್ತರ ಸಮುದ್ರ ಮಾರ್ಗ ಮತ್ತು ಚೆನ್ನೈ-ವ್ಲಾಡಿವೋಸ್ಟಾಕ್ ಕಾರಿಡಾರ್ ಮೂಲಕ ಸಂಪರ್ಕವನ್ನು ಉತ್ತೇಜಿಸುವುದು ಮತ್ತು ಸುಗಮ ಪಾವತಿ ಕಾರ್ಯವಿಧಾನಗಳನ್ನು ಖಚಿತಪಡಿಸುವುದು. ಇವು ಪ್ರಮುಖ ಸಮಸ್ಯೆಗಳು ಎಂದು ಜೈಶಂಕರ್ ಹೇಳಿರುವುದಾಗಿ ವರದಿಯಾಗಿದೆ.(ಏಜೆನ್ಸೀಸ್)