'ಹರ್ ಘರ್ ಭಗವಾ'ದಲ್ಲಿ ಭಾಗವಹಿಸಿ; 'ಹಿಂದೂ ರಾಷ್ಟ್ರ ವೀರ' ಪ್ರಮಾಣಪತ್ರ ಪಡೆಯಿರಿ... ಇಲ್ಲಿದೆ ವಿವರ

bhagawa
Published on

ನವದೆಹಲಿ: ಹಿಂದೂ ಜನಜಾಗೃತಿ ಸಮಿತಿಯ 20 ವರ್ಷದ ವರ್ಷಾಚರಣೆಯ ನಿಮಿತ್ತ ಸಮಿತಿಯ ವತಿಯಿಂದ 'ಹರ್ ಘರ್ ಭಗವಾ' ಅಭಿಯಾನ ಪ್ರಾರಂಭಿಸಲಾಗಿದೆ.

ಇದೇ 3ರಿಂದ 5 ನೇ ತಾರೀಖಿನವರೆಗೆ ಈ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಭಾಗವಹಿಸುವವರಿಗೆ ಹಿಂದೂ ರಾಷ್ಟ್ರ ವೀರ ಎಂಬ ಪ್ರಮಾಣಪತ್ರ ನೀಡಲಾಗುವುದು. ಈ ಪ್ರಮಾಣ ಪತ್ರ ಪಡೆಯಲು ನೀವು ಮಾಡಬೇಕಿರುವುದು ಇಷ್ಟು:

ತಮ್ಮ ಮನೆಯ ಮೇಲೆ ಭಗವಾ ಧ್ವಜವನ್ನು ಹಾರಾಡಿಸಬೇಕು. ಅದರ ಫೋಟೋ ಜತೆಗೆ ನಿಮ್ಮ ಹೆಸರು ಮತ್ತು ವಾಟ್ಸ್​ಆ್ಯಪ್​ ನಂಬರ್ http://Hindurashtra.hindujagruti.org ಈ ಲಿಂಕ್​ನಲ್ಲಿ ತುಂಬಿಸಿ ಕಳುಹಿಸಬೇಕು. ಹೀಗೆ ಮಾಡಿದರೆ 'ಹಿಂದೂ ರಾಷ್ಟ್ರ ವೀರ' ಎಂಬ ಪ್ರಮಾಣಪತ್ರ ನಿಮ್ಮ ವಾಟ್ಸ್​ಆ್ಯಪ್​ ನಂಬರ್​ಗೆ ಕಳುಹಿಸಲಾಗುವುದು ಎಂದು ಸಮಿತಿ ತಿಳಿಸಿದೆ. ಈಗಾಗಲೇ 6 ಲಕ್ಷಕ್ಕೂ ಅಧಿಕ ಜನರು‌ ಸಹಭಾಗಿಯಾಗಿದ್ದಾರೆ ಎಂದು ಅದು ಹೇಳಿದೆ.

ಮನೆಯಲ್ಲಿ ಹಾರಾಡಿಸಿದ ಭಗವಾ ಧ್ವಜದ ಪೋಟೋವನ್ನು ಈ ಕೆಳಗಿನ ಸೋಷಿಯಲ್ ಮೀಡಿಯಾ ಅಕೌಂಟ್​ಗೆ ಟ್ಯಾಗ್ ಮಾಡಬೇಕು.

ಟ್ವಿಟರ್ : @HinduJagrutiorg, @HJSKarnataka

ಫೇಸ್ಬುಕ್ : @JagoHinduBharat, @JagoHinduKarnataka,

Instagram : @JagoHinduBharat

ಟ್ವಿಟರ್‌ ಹ್ಯಾಶ್ ಟ್ಯಾಗ್ #HarGharBhagwa

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net