VIDEO: ತರಕಾರಿ ಖರೀದಿಗೆ ಬಂದವರ ಮೇಲೆ ಬಿದ್ದ ವಿದ್ಯುತ್ ತಂತಿ! ನೋಡನೋಡುತ್ತಿದ್ದಂತೆಯೇ ಸುಟ್ಟುಹೋದ 30 ಮಂದಿ

market
Published on

ಕಾಂಗೋ: ಹೈವೋಲ್ಟೇಜ್ ವಿದ್ಯುತ್ ತಂತಿಯೊಂದು ಮಾರುಕಟ್ಟೆಯ ಮಧ್ಯೆ ಭಾಗ ಬಿದ್ದ ಪರಿಣಾಮವಾಗಿ ತರಕಾರಿ ಖರೀದಿಗೆ ಬಂದ 30 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಕಾಂಗೋ ಗಣರಾಜ್ಯದಲ್ಲಿ ನಡೆದಿದೆ. ಇಲ್ಲಿಯ ಕಿಬ್ಲಾ ಪ್ರದೇಶದ ಮಾರುಕಟ್ಟೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಈ ಮಾರುಕಟ್ಟೆ ತೀರಾ ಗಲೀಜಿನಿಂದ ಕೂಡಿದ್ದು, ರಸ್ತೆ ತುಂಬೆಲ್ಲಾ ಕೆಸರು ತುಂಬಿತ್ತು. ಇದರ ಪರಿಣಾಮವಾಗಿ ವಿದ್ಯುತ್ ಕಂಬಗಳು ಕೂಡ ಸಡಿಲಗೊಂಡಿದ್ದವು. ಇಷ್ಟಾದರೂ ಅದನ್ನು ಯಾರೂ ಗಮನಿಸಿರಲಿಲ್ಲ. ಇಂದು ಬೆಳಗ್ಗೆ ತರಕಾರಿ ಖರೀದಿಸಲು ಜನರು ಬಂದಾಗ ಅವರ ಮೇಲೆ ಹೈವೋಲ್ಟೇಜ್ ತಂತಿ ಬಿದ್ದಿದೆ. ಅಲ್ಲಿ ಸಂಪೂರ್ಣ ಕೆಸರುಮಯವಾಗಿದ್ದ ಹಿನ್ನೆಲೆಯಲ್ಲಿ ಇಡೀ ಪ್ರದೇಶಕ್ಕೆ ಹೈವೋಲ್ಟೇಜ್ ವಿದ್ಯುತ್ ಪಸರಿಸಿದೆ. ಇದರಿಂದ ಕ್ಷಣಾರ್ಧದಲ್ಲೇ ವಿದ್ಯುತ್ ಶಾಕ್ ತಗುಲಿದೆ. ತಂತಿ ನೇರವಾಗಿ ಕೆಸರಿನಿಂದ ಕೂಡಿದ ನೀರಿಗೆ ಬಿದ್ದಿದೆ. ನೀರಿನ ಸಂಪರ್ಕಕ್ಕೆ ಬಂದವರಿಗೆ ಶಾಕ್‌ ತಗುಲಿರುವುದಾಗಿ ಪೊಲೀಸರು ಹೇಳಿದ್ದಾರೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಮೃತದೇಹಗಳು ಒಂದಕ್ಕೊಂದು ಅಂಟಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಹಲವಾರು ಮೃತದೇಹಗಳು ಸಂಪೂರ್ಣವಾಗಿ ಕೆಸರಿನಲ್ಲಿ ಮುಳುಗಿ ಹೋಗಿದೆ.

ಘಟನೆ ನಡೆದ ಸ್ಥಳದ ವಿಡಿಯೋ ಇಲ್ಲಿದೆ ನೋಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net