More

    ನಿನ್ನೆಯವರೆಗೆ ಇಡಿ ಅಧಿಕಾರಿ, ಇಂದು ಬಿಜೆಪಿ ಅಭ್ಯರ್ಥಿ! ಟಿಕೆಟ್‌ಗೆ ಕಾದು ಕುಳಿತವರಿಗೆ ಶಾಕ್‌… ಯಾರಿವರು?

    ಲಖನೌ: ಹಿಂದಿನ ದಿನದವರೆಗೂ ಜಾರಿ ನಿರ್ದೇಶನಾಲಯದ ಅಧಿಕಾರಿ, ಮಾರನೆಯ ದಿನ ಬಿಜೆಪಿ ಅಭ್ಯರ್ಥಿ!

    ಇಂಥದ್ದೊಂದು ಕುತೂಹಲ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಇದ್ದು, ಇದಾಗಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಲಖನೌನ ಸರೋಜಿನಿ ನಗರದ ಮೇಲೆ ಅತಿಯಾದ ಆಸೆ ಇಟ್ಟುಕೊಂಡಿದ್ದ ಅಭ್ಯರ್ಥಿಗಳಿಗೆ ಟಿಕೆಟ್‌ ಸಿಗಲಿಲ್ಲ, ಬದಲಿಗೆ ಜಾರಿ ನಿರ್ದೇಶನಾಲಯದ (ಇಡಿ) ಜಂಟಿ ನಿರ್ದೇಶಕರಾಗಿದ್ದ ರಾಜೇಶ್ವರ್ ಸಿಂಗ್ ಅವರಿಗೆ ಟಿಕೆಟ್‌ ನೀಡಲಾಗಿದೆ. ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮರುದಿನವೇ ಬಿಜೆಪಿಯನ್ನು ಸೇರಿದ್ದರು. ಕೂಡಲೇ ಅವರಿಗೆ ಈ ಕ್ಷೇತ್ರದ ಟಿಕೆಟ್‌ ನೀಡಿರುವುದು ಟಿಕೆಟ್‌ಗಾಗಿ ಕಾದು ಕುಳಿತವರಿಗೆ ಶಾಕ್‌ ನೀಡಿದ್ದರೆ, ಈ ನಡೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿಯೂ ಮುಖ್ಯವಾಗಿ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಸಿಂಗ್‌ ಯಾದವ್ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಇವರು ಕೆಲ ದಿನಗಳ ಹಿಂದಷ್ಟೇ ಸಮಾಜವಾದಿ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.

    ಅಂದಹಾಗೆ ರಾಜೇಶ್ವರ್ ಸಿಂಗ್ ಅವರು 2007ರಲ್ಲಿ ಜಾರಿ ನಿರ್ದೇಶನಾಲಯ ಸೇರಿದ್ದರು. ಅದಕ್ಕೂ ಮೊದಲು ಅವರು ಸುಮಾರು 10 ವರ್ಷಗಳ ಕಾಲ ಉತ್ತರ ಪ್ರದೇಶ ಪೊಲೀಸ್ ಸೇವೆಯಲ್ಲಿದ್ದರು. ಉತ್ತರ ಪ್ರದೇಶ ಪೊಲೀಸ್‌ ಸೇವೆಯಲ್ಲಿದ್ದಾಗ ಅವರು ಸೂಪರ್ ಕಾಪ್ ಅನಿಸಿಕೊಂಡಿದ್ದರು. ಮಹಿಳೆಯರು ಮತ್ತು ಮಕ್ಕಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರಿಗೆ ಬೇಗ ನ್ಯಾಯ ದೊರಕಿಸಿ ಕೊಡಲು ಅವರು ಪ್ರಯತ್ನಿಸುತ್ತಿದ್ದರು.

    ಏರ್‌ಸೆಲ್- ಮ್ಯಾಕ್ಸಿಕ್ ಒಪ್ಪಂದ ಹಗರಣದಲ್ಲಿ ಕಾರ್ತಿ ಚಿದಂಬರಂ ಹಾಗೂ ಅವರ ತಂದೆ ಪಿ. ಚಿದಂಬರಂ ಅವರನ್ನು ರಾಜೇಶ್ವರ್ ಸಿಂಗ್ ಅವರು ವಿಚಾರಣೆಗೆ ಒಳಪಡಿಸಿದ್ದರು. ಮಾತ್ರವಲ್ಲದೇ ಯುಪಿಎ ಸರ್ಕಾರದ ಮೇಲೆ ಕೇಳಿಬಂದ ಪ್ರತಿ ಭ್ರಷ್ಟಾಚಾರ ಆರೋಪಗಳ ಪ್ರಕರಣಗಳ ತನಿಖೆ ನಡೆಸಿದ ತಂಡಗಳಲ್ಲಿ 2009ರಿಂದಲೂ ಅವರು ಭಾಗಿಯಾಗಿದ್ದರು. 2ಜಿ ತರಂಗಾಂತರ ಹಂಚಿಕೆ ಹಗರಣ, ಕಾಮನ್‌ವೆಲ್ತ್ ಗೇಮ್ಸ್ ಹಗರಣ ಮತ್ತು ಕಲ್ಲಿದ್ದಲು ಗಣಿ ಹಂಚಿಕೆ ಹಗರಣಗಳು ಇದರಲ್ಲಿ ಸೇರಿವೆ. ಈ ಎಲ್ಲ ಪ್ರಕರಣಗಳಲ್ಲಿಯೂ ಕಾಂಗ್ರೆಸ್ ಅಥವಾ ಅದರ ಮಿತ್ರಪಕ್ಷಗಳ ಹಿರಿಯ ನಾಯಕರು ಪ್ರಮುಖ ಆರೋಪಿಗಳಾಗಿದ್ದರು.

    ಬಿಜೆಪಿಗೆ ಬನ್ನಿ, ಹೇಮಾ ಮಾಲಿನಿ ಮಾಡ್ತೇನೆ ಎಂಬ ಆಫರ್‌ ಬಂದಿತ್ತು ಎಂದ ಆರ್‌ಎಲ್‌ಡಿ ಮುಖ್ಯಸ್ಥ ಚೌಧರಿ

    ಪೊಲೀಸ್‌ ಠಾಣೆ ಮೆಟ್ಟಿಲೇರಿದ ಐಎಎಸ್‌ ದಂಪತಿ ಫಸ್ಟ್‌ನೈಟ್ ಕೇಸ್‌! 32 ವರ್ಷಗಳ ಬಳಿಕ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts