ಪತಿಯ ಅಕ್ರಮ ಸಂಬಂಧಕ್ಕೆ ಪತ್ನಿ ಬಲಿ: ಅಮ್ಮನ ಸಾಯಿಸಲು ಮಗನೂ ಸಾಥ್!​ ಹಾಸನದಲ್ಲೊಂದು ಭಯಾನಕ ಘಟನೆ

hassan
ಕೊಲೆಯಾದ ಸುಶೀಲಾ. ಆರೋಪಿಗಳಾದ ಮಂಜುನಾಥ್, ಮನೋಜ್
Published on

ಹಾಸನ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎನ್ನುವ ಕಾರಣಕ್ಕೆ ಗಂಡ ಪತ್ನಿಯನ್ನು ಕೊಲೆ ಮಾಡಿರುವ ಭಯಾನಕ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ಮರುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಕೊಲೆಗೆ ಮಗ ಕೂಡ ಸಹಕರಿಸಿದ್ದಾನೆ ಎನ್ನಲಾಗಿದೆ.

ಬಟ್ಟೆಯಿಂದ ಕತ್ತು ಬಿಗಿದು ಅಪ್ಪ-ಮಗ ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮನೆಯ ಸಂಸಾರದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯಗೊಂಡಿದೆ.

ಸುಶೀಲಮ್ಮಾ (50) ಕೊಲೆಯಾದವರು. ಮಂಜುನಾಥ್ ಮತ್ತು ಮನೋಜ್ ಆರೋಪಿಗಳು. ಇವರು ಒಂದೇ ಮನೆಯಲ್ಲಿ ಬೇರೆ ಬೇರೆ ವಾಸವಿದ್ದರು ಎನ್ನಲಾಗಿದೆ. ತನ್ನ ಅಪ್ಪನ ಅನೈತಿಕ ಸಂಬಂಧಕ್ಕೆ ಅಡ್ಡಪಡಿಸಿರುವ ಕಾರಣ ಈ ಕೊಲೆ ಮಾಡಲಾಗಿದೆ ಎಂದು ಮಗಳು ಆರೋಪಿಸಿದ್ದಾಳೆ.

ಪತಿಯ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆಂದು ತನ್ನ ತಾಯಿ ಕೊಂದಿದ್ದಾರೆಂದು ಮಗಳ ಆರೋಪ. ಪೊಲೀಸರು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net