ಹುಟ್ಟುಹಬ್ಬಕ್ಕೆ ಡಾನ್ಸ್‌ ಮಾಡಿ ಮೋಡಿ ಮಾಡಿದ 93ರ ಅಜ್ಜಿ!

dance
Published on

ಕೋಲ್ಕತಾ: 50 ವರ್ಷ ವಯಸ್ಸಾಗುತ್ತಿದ್ದಂತೆಯೇ ಅಯ್ಯೋ ವಯಸ್ಸಾಗಿ ಹೋಯಿತು ಎನ್ನುವವರೇ ಹೆಚ್ಚು. ಇನ್ನು ಡಾನ್ಸ್‌ ಮಾಡುವುದು, ಜಿಗಿದಾಡುವ ಮಾತಂತೂ ಬಲುದೂರ.

ಆದರೆ ವಯಸ್ಸಾಗುವುದು ದೇಹಕ್ಕೆ ಮಾತ್ರ, ಮನಸ್ಸಿಗೆ ಅಲ್ಲ. ಮನಸ್ಸೊಂದಿದ್ದರೆ ವಯಸ್ಸು ಅಡ್ಡಿ ಬರುವುದೇ ಇಲ್ಲ, ಉತ್ಸಾಹಕ್ಕೆ ವಯಸ್ಸು ಅಡ್ಡಿಯಾವುದೇ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ 93 ವರ್ಷದ ಅಜ್ಜ.

ತಮ್ಮ ಹುಟ್ಟುಹಬ್ಬದಲ್ಲಿ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ವೃದ್ಧೆಯೊಬ್ಬರು ನೆಟ್ಟಿಗರ ಗಮನ ಸೆಳೆದಿದ್ದಾರೆ. ಇವರ ನೃತ್ಯವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.2018ರಲ್ಲಿ ಬಿಡುಗಡೆಯಾದ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಸಾರಾ ಅಲಿಖಾನ್ ನಟನೆಯ ಸಿಂಬಾ ಚಿತ್ರದ ಪ್ರಸಿದ್ಧ ‘ಆಂಖ್ ಮಾರೆ’ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಅವರ ಮೊಮ್ಮಗ ಗೌರವ್ ಸಹಾ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

‘ಥಮ್ಮಾಸ್ ಸ್ವೀಟ್ 93 ಹುಟ್ಟುಹಬ್ಬ’ ಎಂದು ಬರೆದುಕೊಂಡಿದ್ದಾನೆ. ವಿಡಿಯೋದೊಂದಿಗೆ ಈ ಫೋಟೋಗಳು ವೈರಲ್ ಆಗಿದೆ. ಅಜ್ಜಿಗೆ ಮನೆಯವರು ಕೂಡ ಸಾಥ್ ನೀಡಿ ಅವರನ್ನು ಹುರಿದುಂಬಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಬರ್ತ್ ಡೇ ಟೊಪ್ಪಿ ಹಾಗೂ ಚಾಕ್ಲೆಟ್ ಕೇಕ್ ನೊಂದಿಗೆ ಬರ್ತ್ ಡೇ ಆಚರಿಸಿದ್ದಾರೆ. ಅಜ್ಜಿ ಗೋಲ್ಡನ್ ಕಲರ್ ದಪ್ಪವಾದ ಬಾರ್ಡರ್ ಇರುವ ಬಿಳಿ ಸೀರೆ ಉಟ್ಟಿದ್ದಾರೆ. ಎರಡು ಚಿನ್ನದ ಸರಗಳನ್ನು ಹಾಕಿ ತನ್ನ ಕುಟುಂಬದ ಸದಸ್ಯರೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net