

ಮಂಗಳೂರು: ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಕಡೆಯಿಂದ ಅಕ್ರಮವಾಗಿ ದನ ಸಾಗಾಟ ಮಾಡಿಕೊಂಡು ಹೌದಾಳ್ ಎಂಬಲ್ಲಿ ಹೋಗುತ್ತಿದ್ದವರನ್ನು ತಡೆಯಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಾಟ ನಡೆಸಿದ್ದಾರೆ.
ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ. 6 ದನಗಳನ್ನು ರಿಟ್ಸ್ ಕಾರಿನಲ್ಲಿ ಅಕ್ರಮವಾಗಿ ತುಂಬಿಸಿಕೊಂಡು ಮುಂಜಾನೆ ಹೌದಾಳ್ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಮೂಡುಬಿದಿರೆ ಇನ್ಸ್ಪೆಕ್ಟರ್ ಬಿ.ಎಸ್ . ದಿನೇಶ್ ಕುಮಾರ್ ಅವರ ತಂಡವು ಬೆನ್ನತ್ತಿದೆ.
ಇದನ್ನೂ ಓದಿ: ಭಾರಿ ಮಳೆ: ನೀರಿನಲ್ಲಿ ಕೊಚ್ಚಿ ಹೋದ ಸವಾರ
ಆರೋಪಿಗಳು ಪೊಲೀಸ್ ಜೀಪ್ಗೆ ಡಿಕ್ಕಿಹೊಡೆಯಿಸಲು ಯತ್ನಿಸಿದಾಗ ಪೊಲೀಸರು ಗಾಳಿಯಲ್ಲಿ ಗುಂಡುಹಾರಿಸಿದ್ದಾರೆ. ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದು ಪೊಲೀಸರು ವಾಹನ ಮತ್ತು ದನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.