ಮಹೀಂದ್ರಾ ತದ್ರೂಪಿ ಪುಟಾಣಿ ವಾಹನ​ ಉಚಿತವಾಗಿ ಪಡೆಯಲು ಇಲ್ಲಿದೆ ಆಫರ್​, ಕೆಲವೇ ಗಂಟೆ ಬಾಕಿ...

mahindra1
Published on

ನವದೆಹಲಿ: ಮಹೀಂದ್ರಾ ಗ್ರೂಪ್​ ಭರ್ಜರಿ ಆಫರ್​ ನೀಡಿದೆ. ಉಚಿತವಾಗಿ  ಮಹೀಂದ್ರಾ ವಾಹನದ ಸ್ಕೇಲ್​ ಮಾಡೆಲ್​ (ಪ್ರತಿಕೃತಿ) ನಿಮ್ಮದಾಗಿಸಿಕೊಳ್ಳುವ ಯೋಜನೆಯೊಂದನ್ನು ಮಹೀಂದ್ರಾ ನೀಡಿದ್ದು, ಈ ಬಗ್ಗೆ ತನ್ನ ಟ್ವಿಟರ್​ನಲ್ಲಿ ಮಾಹಿತಿ ನೀಡಿದೆ.

ಅದಕ್ಕೆ ನೀವು ಹೆಚ್ಚೇನೂ ಮಾಡಬೇಕಿಲ್ಲ. ಸ್ವಲ್ಪ ಬುದ್ಧಿ ಉಪಯೋಗಿಸಿದರೆ ಆಯಿತು. ಅದೇನೆಂದರೆ, ಇಲ್ಲಿ ಇರುವ ಕೋತಿಯ ಚಿತ್ರಕ್ಕೆ ನೀವೊಂದು ಕ್ಯಾಪ್ಷನ್​ (ಶೀರ್ಷಿಕೆ) ನೀಡಬೇಕು. ಫೋಟೋದಲ್ಲಿ ಮಂಗವೊಂದು ಡಿಶ್​ ಮೇಲೆ ಕುಳಿತುಕೊಂಡಿದೆ. ಈ ಫೋಟೋ ನೋಡಿದ ತಕ್ಷಣ ನಿಮಗೆ ಏನು ಹೊಳೆಯುತ್ತದೆ ಎಂಬ ಬಗ್ಗೆ ಮಹೀಂದ್ರಾ ಅವರು ಶೇರ್​ ಮಾಡಿರುವ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಬೇಕು.

ಒಂದು ವೇಳೆ ನಿಮ್ಮ ಶೀರ್ಷಿಕೆ ಮಹೀಂದ್ರಾ ಗ್ರೂಪ್​ ಅಧಿಕಾರಿಗಳಿಗೆ ಮೆಚ್ಚುಗೆಯಾದರೆ ನಿಮಗೆ ವಾಹನದ ಸ್ಕೇಲ್​ ಮಾಡೆಲ್​ ಉಚಿತವಾಗಿ ನೀಡಲಿದ್ದಾರಂತೆ. ಈ ಕುರಿತು ಟ್ವಿಟರ್​ನಲ್ಲಿ ಮಾಹಿತಿ ನೀಡಲಾಗಿದೆ.

ಉತ್ತಮ ಶೀರ್ಷಿಕೆಯನ್ನು ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ನೀಡಬೇಕು. ತಮಗೆ ಮೆಚ್ಚುಗೆಯಾಗುವ ಇಬ್ಬರಿಗೆ (ಒಂದು ಹಿಂದಿ ಹಾಗೂ ಇನ್ನೊಂದು ಇಂಗ್ಲಿಷ್​) ಮಹೀಂದ್ರಾ ಕಾರನ್ನು ನೀಡಲಾಗುತ್ತದೆ ಎಂದು ಟ್ವಿಟರ್​ನಲ್ಲಿ ತಿಳಿಸಲಾಗಿದೆ.

ಅಂದ ಹಾಗೆ ಈ ಸ್ಪರ್ಧೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಅಂದರೆ ಇಂದು 2 ಗಂಟೆಗೆ ಸ್ಪರ್ಧೆ ಕ್ಲೋಸ್​. ಆದ್ದರಿಂದ ಬೇಗ ಬೇಗ ಶೀರ್ಷಿಕೆಯನ್ನು ಕೊಟ್ಟು ಅದೃಷ್ಟ ಪರೀಕ್ಷಿಸಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net