

ಇಸ್ರೇಲ್: ಪುಟ್ಟ ದೇಶ ಇಸ್ರೇಲ್ ಕೃಷಿಯಲ್ಲಿ ಇದಾಗಲೇ ಇಡೀ ವಿಶ್ವದ ಗಮನ ಸೆಳೆದಿದ್ದು, ಇದೀಗ ತಂತ್ರಜ್ಞಾನದಲ್ಲಿಯೂ ಬಹಳ ಮುಂದುವರೆಯತೊಡಗಿದೆ. ಇದೀಗ ಹೊಸದೊಂದು ಸಾಹಸಕ್ಕೆ ಅದು ಕೈಹಾಕಿದ್ದು, ಗೋಲ್ಡ್ ಫಿಷ್‌ಗೆ ವಾಹನ ಚಲಾಯಿಸುವ ತರಬೇತಿಯನ್ನು ನೀಡಿದೆ!
ಬೆನ್ ಗುರಿಯನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಅಕ್ವೇರಿಯಂನಲ್ಲಿರುವ ಗೋಲ್ಡ್ ಫಿಷ್ ವಾಹನ ಚಲಾಯಿಸುವಂತೆ ಮಾಡಿದ್ದಾರೆ. ಈ ಮೀನಿಗಾಗಿ ಫಿಷ್ ಆಪರೇಟೆಡ್ ವೆಹಿಕಲ್ ನಿರ್ಮಿಸಲಾಗಿದೆ. ಅದರ ಮೇಲೆ ಅಕ್ವೇರಿಯಂ ಇಟ್ಟರೆ ಮೀನುಗಳು ಅದನ್ನು ಚಲಾಯಿಸುತ್ತವೆ! ಒಟ್ಟು ಆರು ಗೋಲ್ಡ್‌ಫಿಷ್‌ಗಳಿಗೆ ಈ ತರಬೇತಿ ನೀಡಲಾಗಿದೆ. ಬಿಹೇವಿಯರಲ್ ಬ್ರೇನ್ ರಿಸರ್ಚ್ ಜರ್ನಲ್ನಲ್ಲಿ ಈ ಬಗ್ಗೆ ದಾಖಲು ಮಾಡಿರುವ ವಿಜ್ಞಾನಿಗಳು ಮೀನು ಹೇಗೆ ತರಬೇತಿ ಪಡೆಯುತ್ತವೆ ಎಂಬುದನ್ನು ವಿವರಿಸಿದ್ದಾರೆ.
ಮೀನುಗಳ ಚಲನೆಯನ್ನು ಪತ್ತೆಹಚ್ಚಲು ಕ್ಯಾಮರವಾವನ್ನು ಅಳವಡಿಸಲಾಗಿದೆ. ಮೀನುಗಳು ಮೂರರಿಂದ ನಾಲ್ಕು ಮೀಟರ್ ಕೋಣೆಯಲ್ಲಿ ನ್ಯಾವಿಗೇಟ್ ಮಾಡುವುದನ್ನು ಮೊದಲು ಕಲಿತಿವೆ. ನಂತರ ಕೆಲವು ದಿನಗಳ ತರಬೇತಿಯ ಬಳಿಕ ಮೀನುಗಳು ಯಶಸ್ವಿಯಾಗಿ ವಾಹನವನ್ನು ಸರಿಯಾದ ಮಾರ್ಗದಲ್ಲಿ ಚಲಾಯಿಸುವುದನ್ನು ಕಲಿತಿವೆ ಎಂದಿದ್ದಾರೆ ಅವರು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅಚ್ಚರಿ ಮೂಡಿಸುವಂತಿದೆ.
ಇಲ್ಲಿದೆ ನೋಡಿ ವಿಡಿಯೋ: