ಪಾಕಿಸ್ತಾನದ ಆಡಳಿತ ಸೇವೆಯಲ್ಲೀಗ ಪ್ರಥಮ ಹಿಂದೂ ಮಹಿಳೆ: ಪ್ರತಿಷ್ಠಿತ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ

CSS
Published on

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾಗಿರುವ ಪಾಕಿಸ್ತಾನ ಕೇಂದ್ರಿಯ ಸುಪೀರಿಯರ್ ಸರ್ವೀಸಸ್ (ಸಿಎಸ್‍ಎಸ್) ಪರೀಕ್ಷೆಯಲ್ಲಿ ಹಿಂದೂ ಮಹಿಳೆಯೊಬ್ಬರು ತೇರ್ಗಡೆಯಾಗಿದ್ದಾರೆ. ಈ ಮೂಲಕ ಈ ಪರೀಕ್ಷೆಯನ್ನು ಪಾಸ್‌ ಮಾಡಿರುವ ಮೊದಲ ಹಿಂದೂ ಮಹಿಳೆ ಎನಿಸಿಕೊಮಡಿದ್ದಾರೆ.

ಎಂಬಿಬಿಎಸ್ ಪದವೀಧರೆಯಾಗಿರುವ ಡಾ. ಸನಾ ರಾಮಚಂದ್ರ ಅವರು ಇದೀಗ ಪಾಕಿಸ್ತಾನದ ಆಡಳಿತ ಸೇವೆಗೆ (ಪಿಎಎಸ್) ಆಯ್ಕೆಯಾಗಿದ್ದಾರೆ.ಲಿಖಿತ ಪರೀಕ್ಷೆಗೆ ಹಾಜರಾಗಿದ್ದ 18,553 ಅಭ್ಯರ್ಥಿಗಳ ಪೈಕಿ 221 ಮಂದಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಸನಾ ಒಬ್ಬರು.

ಪಿಎಎಸ್ ಉನ್ನತ ಶ್ರೇಣಿಯಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸಹಾಯಕ ಆಯುಕ್ತರನ್ನಾಗಿ ನಿಯೋಜಿಸಲಾಗುತ್ತದೆ ನಂತರ ಜಿಲ್ಲಾಧಿಕಾರಿಯಾಗಿ ಬಡ್ತಿ ನೀಡಲಾಗುತ್ತದೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಶಿಕರ್‍ಪುರ ಜಿಲ್ಲೆಯು ಅತಿ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿದ್ದು, ಸನಾ ಕೂಡ ಅಲ್ಲಿಯವರು. ತಾವು ಆಯ್ಕೆ ಆಗಿರುವುದನ್ನು ಟ್ವೀಟ್‌ ಮಾಡಿರುವ ಸನಾ, ವಾಹೇಗುರು ಜಿ ಕಾ ಖಲ್ಸಾ ವಹೇ ಗುರು ಜಿಕಿ ಫತೇಹ್, ಸರ್ವಶಕ್ತನಾದ ಅಲ್ಲಾಹನ ಕೃಪೆಯಿಂದ ನಾನು ಸಿಎಸ್‌ಎಸ್ 2020ನ್ನು ಪೂರ್ಣಗೊಳಿಸಿದ್ದೇನೆ. ಪಿಎಸ್‍ಎಸ್ ಹುದ್ದೆಗೆ ನೇಮಕವಾಗಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ಸಂತೋಷವಾಗಿದೆ. ಇದರ ಸಂಪೂರ್ಣ ಶ್ರೇಯಸ್ಸು ನನ್ನ ತಂದೆ-ತಾಯಿಗೆ ಹೋಗುತ್ತದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net