ಚಿಕನ್​, ಮಟನ್​ಗಿಂತಲೂ ಗೋಮಾಂಸವನ್ನೇ ಹೆಚ್ಚು ತಿನ್ನಿ- ಬಿಜೆಪಿಗೆ ಶಾಕ್​ ಕೊಟ್ಟ ಸಂಸದ

cow
Published on

ಮೆಘಾಲಯ: ಗೋಹತ್ಯೆಗೆ ಸಂಬಂಧಿಸಿದಂತೆ ಭಾರಿ ಚರ್ಚೆಯಾಗುತ್ತಿರುವ ನಡುವೆಯೇ, ಗೋವನ್ನು ಹಿಂದೂಗಳು ದೇವರು ಎಂದು ಪೂಜಿಸುವ ಹಿನ್ನೆಲೆಯಲ್ಲಿ ಅವುಗಳ ಹತ್ಯೆ ಮಹಾಪಾಪ ಎನ್ನುತ್ತಿರುವ ನಡುವೆಯೇ, ಇದೀಗ ಸಂಸದರೊಬ್ಬರು ಗೋಮಾಂಸವನ್ನು ಹೆಚ್ಚೆಚ್ಚು ತಿನ್ನಿ ಎಂದಿದ್ದಾರೆ.

ಆದರೆ ಈಗ ಇದು ಇಷ್ಟು ಚರ್ಚೆಗೆ ಗ್ರಾಸವಾಗಲು ಕಾರಣವೇನೆಂದರೆ ಹೀಗೆ ಹೇಳಿದ್ದು ಬಿಜೆಪಿ ಸಂಸದ! ಆರ್​ಎಸ್​ಎಸ್​ ಹಾಗೂ ಬಿಜೆಪಿ ಗೋಹತ್ಯೆ, ಗೋಮಾಂಸ ಸೇವನೆಯನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದಿರುವ ಬೆನ್ನಲ್ಲೇ ಬಿಜೆಪಿ ಸಂಸದ ಈ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಮೆಘಾಲಯದ ನೂತನ ಸಚಿವ ಸ್ಯಾನ್ಬೋರ್ ಶುಲ್ಲೈ ಅವರು ಹೆಚ್ಚು ಹೆಚ್ಚು ಗೋಮಾಂಸ ತಿನ್ನಲು ಕರೆ ನೀಡಿದ್ದಾರೆ. ಕಳೆದ ವಾರವಷ್ಟೇ ಇವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಅವರು, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಹಾಗಾಗಿ ಪ್ರತಿಯೊಬ್ಬರಿಗೂ ಅವರವರ ಆಹಾರ ಆಯ್ಕೆ ಸ್ವಾತಂತ್ರ್ಯವಿದ್ದು, ನಾನಂತೂ ಜನರಿಗೆ ಚಿಕನ್, ಮಟನ್, ಮೀನಿಗಿಂತ ಹೆಚ್ಚು ಗೋಮಾಂಸ ತಿನ್ನಿ ಎಂದು ಪ್ರೋತ್ಸಾಹಿಸುತ್ತೇನೆ ಎಂದಿದ್ದಾರೆ. ಅಸ್ಸಾಂನಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ಜಾರಿಯಲ್ಲಿದೆ. ಆದ್ದರಿಂದ ಕಾಯ್ದೆಯಿಂದ ಮೆಘಾಲಯಕ್ಕೆ ಜಾನುವಾರು ಸಾಗಣೆಗೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹಿಮವಂತ ಬಿಸ್ವ ಶರ್ಮಾಗೆ ಮನವಿ ಮಾಡುತ್ತೇನೆ ಎಂದಿದ್ದಾರೆ ಈ ಸಂಸದ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net