ಈಕೆಗಿದೆ ಎರಡೆರಡು ಯೋನಿ, ಎರಡು ಗರ್ಭಕೋಶ- ಎರಡು ಬಾರಿ ಮಾಸಿಕ ಋತುಸ್ರಾವ: ಇವಳೀಗ ಗರ್ಭವತಿ!

lady1
Published on

ಪೆನ್ಸಿಲ್ವೇನಿಯಾ: ಈ ಚಿತ್ರದಲ್ಲಿ ಕಾಣುತ್ತಿರುವ ಯುವತಿ ವೈದ್ಯಲೋಕಕ್ಕೆ ಸವಾಲಾಗಿದ್ದಾಳೆ. ಏಕೆಂದರೆ ಇವಳಿಗೆ ಹುಟ್ಟುತ್ತಲೇ ಎರಡು ಯೋನಿ ಇದ್ದು, ಎರಡು ಗರ್ಭಾಶಯವೂ ಇದೆ, ಮಾತ್ರವಲ್ಲದೇ ತಿಂಗಳಿಗೆ ಎರಡು ಬಾರಿ ಮಾಸಿಕ ಋತುಸ್ರಾವವೂ ಆಗುತ್ತದೆ!

ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯ 20 ವರ್ಷದ ಕಾಲೇಜು ವಿದ್ಯಾರ್ಥಿನಿ ಈಕೆ. ಜನನಪೂರ್ವದಲ್ಲಿ ಕಂಡುಬರುವ ಡೀ ಏಂಜೆಲೊ ಯುಟೇರಿನೇ ಡೈಡೆಲ್‌ಫಿಸ್‌ ಎಂಬ ಸಮಸ್ಯೆಯಿಂದ ಈಕೆ ಬಳಲುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ. ಈ ಸಮಸ್ಯೆಗೆ ಒಳಗಾದ ಹೆಣ್ಣುಮಗುವಿಗೆ ಹುಟ್ಟಿನಿಂದಲೇ ಎರಡು ಗರ್ಭಕೋಶ, ಯೋನಿ ಇರುವುದಾಗಿ ಅವರು ವಿವರಿಸುತ್ತಾರೆ. ವಿಚಿತ್ರ ಎಂದರೆ, ಇಂಥವರು ಎರಡೂ ಗರ್ಭಕೋಶಗಳಲ್ಲಿಯೂ ಗರ್ಭಧರಿಸುವ ಸಾಧ್ಯತೆಗಳಿರುತ್ತವಂತೆ!

ಈಕೆಗೆ ತನಗೆ ಈ ರೀತಿಯ ವಿಚಿತ್ರ ಸಮಸ್ಯೆ ಇರುವುದು 18 ವರ್ಷದವರೆಗೂ ತಿಳಿದೇ ಇರಲಿಲ್ಲ. ಪ್ರತಿ ತಿಂಗಳೂ ಎರಡು ಬಾರಿ ಮಾಸಿಕ ಋತುಸ್ರಾವ ಆಗುತ್ತಿದ್ದುದರಿಂದ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾಳೆ. ಆದರೆ ಸಮಸ್ಯೆ ಬಗೆಹರಿದಿರಲಿಲ್ಲ. ನಂತರ 18ನೇ ವಯಸ್ಸಿನಲ್ಲಿ ವೈದ್ಯರೊಬ್ಬರು ಇದನ್ನು ಪತ್ತೆ ಹಚ್ಚಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ.

ಈಕೆ ಇದೀಗ ಬೆಳಕಿಗೆ ಬರಲು ಕಾರಣ, ಒಂದು ಗರ್ಭಕೋಶದ ಮೂಲಕ ಗರ್ಭವತಿಯಾಗಿದ್ದಾಳೆ.ಅಚ್ಚರಿಯ ವಿಷಯ ಎಂದರೆ ಈಕೆ ಗರ್ಭ ಧರಿಸುವ ಅವಧಿಯಲ್ಲಿ ಇನ್ನೊಂದು ಗರ್ಭಕೋಶದ ಮೂಲಕ ಈಕೆಗೆ ಋತುಸ್ರಾವವಾಗುತ್ತಿತ್ತು. ಅದೇ ಸಮಯದಲ್ಲಿ ಎರಡನೆಯ ಗರ್ಭಕೋಶದ ಮೂಲಕ ಗರ್ಭ ಧರಿಸಿದ್ದು, ಈಕೆಯ ಬಗ್ಗೆ ಇನ್ನಷ್ಟು ಅಧ್ಯಯನಗಳನ್ನು ವೈದ್ಯರು ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net