

ಉತ್ತರ: ಮದುವೆ ಆದ ಒಂದು ವರ್ಷದ ಒಳಗೆ ವಿಚ್ಛೇದನದ ಅರ್ಜಿ ಹಾಕುವಂತಿಲ್ಲ. ಕೇವಲ ವಿಶೇಷ ಸನ್ನಿವೇಶಗಳು ಇದ್ದಾಗ ಮಾತ್ರ ನ್ಯಾಯಾಲಯದ ಅನುಮತಿ ಪಡೆದು ವಿಚ್ಛೇದನಕ್ಕೆ ಅರ್ಜಿ ವರ್ಷದ ಒಳಗೇ ಹಾಕಬಹುದು. ಕೆಲವು ತಿಂಗಳ ಸಂಸಾರದಲ್ಲಿ , ತಪ್ಪು ಕಲ್ಪನೆಗಳಿಂದ ಬಂದ ಭಿನ್ನಾಭಿಪ್ರಾಯಗಳ ಕಾರಣದಿಂದ , ವಿವಾಹ ವಿಚ್ಛೇದನ ಡೆಯುವುದಕ್ಕೆ ಮುಂದಾಗುವುದು ಒಳ್ಳೆಯದಲ್ಲ. ನೀವು ಹೇಳಿದ ಕಾರಣಗಳ ಆಧಾರದ ಮೇಲೆ ವಿಚ್ಛೇದನ ಸಿಗುವುದೂ ಕಷ್ಟ. ಬದಲಿಗೆ ನೀವು , ನಿಮ್ಮ ತಾಲ್ಲೂಕಿನ ಮಧ್ಯಸ್ಥಿಕೆ ಕೇಂದ್ರಕ್ಕೆ ʼ ನಿಮ್ಮಿಬ್ಬರ ಮಧ್ಯೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ ಮಾಡ ಬೇಕುʼ ಎಂದು ಅರ್ಜಿ ಕೊಡಿ.
ಅಲ್ಲಿ ನೀವು ಇಬ್ಬರೂ ಕೂತು ಮಾತಾಡಿದಾಗ ಸಮಸ್ಯೆ ಬಗೆಹರಿಯ ಬಹುದು. ಆಕೆಯೂ ಒಪ್ಪಿದರೆ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಇಲ್ಲದಿದ್ದರೆ, ಇಬ್ಬರೂ ಹೇಗೆ ಕೂಡಿ ಬಾಳಬೇಕು ಎನ್ನುವುದರ ವಿಷಯವಾಗಿಯೂ ಒಪ್ಪಂದಕ್ಕೆ ಬರಬಹುದು. ಅವಳ ರಕ್ತಸ್ರಾವದ ವಿಷಯದ ಆಧಾರದಿಂದ ನಿಮಗೆ ವಿಚ್ಛೇದನ ಸಿಗಲಾರದು.
ತಜ್ಞ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆದು ಆರೋಗ್ಯಕರ ದೈಹಿಕ ಸಂಬಂಧವನ್ನು ಮುಂದುವರೆಸಬಹುದು. ನಿಮ್ಮ ಬಗ್ಗೆ ಆಕೆಗೆ ಇರುವ ಅನುಮಾನವನ್ನು ಸಮಾಧಾನ ಚಿತ್ತದಿಂದ ಬಗೆಹರಿಸಿ. ಬೇಕಿದ್ದರೆ ವಿವಾಹ ಸಂಧಾನಕಾರರ/ ಮ್ಯಾರೇಜ್ ಕೌನ್ಸೆಲರ್ ಸಹಾಯವನ್ನೂ ಪಡೆಯಿರಿ. ಆತುರ ಪಟ್ಟು ವಿಚ್ಛೇದನ ಪಡೆಯಲು ಮುಂದಾಗ ಬೇಡಿ.