ಬೆಂಗಳೂರು ಪೊಲೀಸ್ರೇ ಇಬ್ಬರು ಮಕ್ಳನ್ನು ಬಿಟ್ಟು ನನ್ನ ಹೆಂಡ್ತಿ ಓಡೋಗಿದ್ದಾಳೆ, ಹುಡುಕಿ ಕೊಡಿ ಪ್ಲೀಸ್​: ದೆಹಲಿ ವ್ಯಕ್ತಿ ಮೊರೆ

twitter
ಪತಿ ಅರವಿಂದ್​ ಹಾಗೂ ಆರೋಪಿ
Published on

ಬೆಂಗಳೂರು: ಬೆಂಗಳೂರು ಪೊಲೀಸ್ರೇ ನನ್ನ ಹೆಂಡ್ತಿ ಓಡಿಹೋಗಿದ್ದಾಳೆ, ಹುಡುಕಿ ಕೊಡಿ ಪ್ಲೀಸ್​ ಎಂದು ದೆಹಲಿಯ ಪತಿಯೊಬ್ಬ ಬೆಂಗಳೂರು ಪೊಲೀಸರನ್ನು ಮನವಿ ಮಾಡಿಕೊಂಡಿದ್ದು ಇದೀಗ ಭಾರಿ ವೈರಲ್​ ಆಗಿದೆ. ಇದಕ್ಕೆ ಕಾರಣ, ಅವರು ಮನವಿ ಮಾಡಿಕೊಂಡಿರುವುದು ಟ್ವಿಟರ್​ ಮೂಲಕ!

ದೆಹಲಿಯ ಅರವಿಂದ್ ಎನ್ನುವವರು ಟ್ವೀಟ್​ ಮೂಲಕ ತಮ್ಮ ಪತ್ನಿಯನ್ನು ಹುಡುಕಿ ಕೊಡುವಂತೆ ಕೋರಿದ್ದಾರೆ. ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿರುವ ಅವರು, ನನ್ನ ಹೆಂಡ್ತಿ ಮತ್ತೊಬ್ಬನ ಜತೆ ಇರುತ್ತಾಳೆ. ಇಬ್ಬರು ಮಕ್ಕಳನ್ನು ಬಿಟ್ಟು ದೆಹಲಿಯಿಂದ ಬೆಂಗಳೂರಿಗೆ ಬಂದು ಬಿಟ್ಟಿದ್ದಾಳೆ. ಬಲವಂತವಾಗಿ ಆಕೆಯನ್ನು ಇಟ್ಟುಕೊಳ್ಳಲಾಗಿದೆ. ಈಗ ಎಲ್ಲಿದ್ದಾಳೋ ಗೊತ್ತಿಲ್ಲ. ಪತ್ನಿಯನ್ನು ಹುಡುಕಲು ನಿಮ್ಮ ಸಹಾಯ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ತಾವು ಪತ್ನಿ ಮತ್ತು ಮಗುವಿನ ಜತೆಗೆ ಇರುವ ಫೋಟೋ ಹಾಗೂ ಪತ್ನಿಯನ್ನು ಓಡಿಸಿಕೊಂಡು ಹೋಗಿದ್ದಾನೆ ಎಂಬ ವ್ಯಕ್ತಿಯ ಫೋಟೋ ಕೂಡ ಅರವಿಂದ್​ ಶೇರ್​ ಮಾಡಿಕೊಂಡಿದ್ದಾರೆ.

ಇದಕ್ಕೆ ಬೆಂಗಳೂರು ನಗರ ಪೊಲೀಸ್​ ಟ್ವಿಟರ್​ ಖಾತೆಯಿಂದ ರಿಟ್ವೀಟ್ ಮಾಡಿದ್ದು, ನಿಮ್ಮ ಹತ್ತಿರದ ಪೊಲೀಸ್​ ಠಾಣೆಗೆ ವಿವರಗಳ ಸಮೇತ ದೂರು ಸಲ್ಲಿಸಿ. ನಿಮಗೆ ಅವರು ನೆರವು ಮಾಡುತ್ತಾರೆ ಎಂದು ಉತ್ತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net