ತಾಯಿ ಕಿಡ್ನಿ ನೀಡಿದರೂ ಬದುಕುಳಿಯಲಿಲ್ಲ ಕಿರುತೆರೆ ನಟಿ

leena acharya
Published on

ನವದೆಹಲಿ: ಕ್ಲಾಸ್ ಆಫ್ 2020, ಸೆಥ್ ಜೀ, 'ಸೇಠ್ ಜೀ, ಆಪ್ ಕೇ ಆ ಜಾನೇ ಸೇ, ಮೇರಿ ಹಾನಿಕಾಕರ್ ಬೀವೀ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಡೆಸಿರುವ ಕಿರುತೆರೆ ನಟಿ ಲೀನಾ ಆಚಾರ್ಯ ಮೂತ್ರಪಿಂಡದ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಲೀನಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕೆಲ ತಿಂಗಳ ಹಿಂದೆ ಅವರ ತಾಯಿ ಮೂತ್ರಪಿಂಡವನ್ನು ನೀಡಿದ್ದರು. ಆದರೂ ಚಿಕಿತ್ಸೆ ಫಲಿಸದೇ ನಟಿ ಮೃತಪಟ್ಟಿದ್ದಾರೆ. ಈ ಮೊದಲು ಕರೊನಾದಿಂದಾಗಿ ಇವರು ಮೃತಪಟ್ಟಿರುವುದಾಗಿ ಸುದ್ದಿಯಾಗಿತ್ತು. ಅದರೆ ವೈದ್ಯರು ಮೂತ್ರಪಿಂಡದ ವೈಫಲ್ಯದಿಂದ ನಿಧನರಾಗಿರುವುದಾಗಿ ದೃಢಪಡಿಸಿದ್ದಾರೆ.

'2015ರಲ್ಲಿ ಲೀನಾ ಆಚಾರ್ಯ ಆರೋಗ್ಯ ಚೆನ್ನಾಗಿಲ್ಲ ಎಂದು ತಿಳಿಯಿತು. ಒಂದು ಕಿಡ್ನಿ ಮೇಲೆ ಆಗ ಅವರು ಬದುಕುಳಿದಿದ್ದರು. ಕೆಲ ತಿಂಗಳುಗಳಿಂದ ಅವರ ಆರೋಗ್ಯದಲ್ಲಿ ಬದಲಾವಣೆ ಆಗುತ್ತಲಿತ್ತು. ಅವರು ಇಂದು ದೈಹಿಕವಾಗಿ ಇರದಿದ್ದರೂ ಕೂಡ ನಾನು ಮಾತ್ರ ಎಂದಿಗೂ ಅವರನ್ನು ನೆನಪಿಟ್ಟುಕೊಳ್ಳುತ್ತೇನೆ' ಎಂದು ಕಿರುತೆರೆ ನಟ ವರ್ಷಿಪ್​ ಖನ್ನಾ ಹೇಳಿದ್ದಾರೆ.

ಅವರ ಪ್ರಸಿದ್ಧ ಧಾರಾವಾಹಿ ಕ್ಲಾಸ್ ಆಫ್ 2020ಯಲ್ಲಿ ಅವರ ಜತೆ ನಟಿಸಿದ್ದ ನಟ ರೋಹನ್​, ಲೀನಾ ಜತೆಗಿನ ತಮ್ಮ ಅನುಭವವನ್ನು ಹಂಚಿಕೊಂಡು ದುಃಖಿತರಾಗಿದ್ದಾರೆ.

ನನ್ನ ಉತ್ತಮ ಸ್ನೇಹಿತೆ ಹಾಗೆಯೇ ಶ್ರೇಷ್ಠ ಕಲಾವಿದೆ ಕೂಡ ಹೌದು. ಲೀನಾ ಆಚಾರ್ಯ ಅವರು ಯಾವಾಗಲೂ ಇತರರ ಪರ ನಿಲ್ಲುತ್ತಾರೆ. ಸದ್ಯ ಅವರು ಈ ಜಗತ್ತಿಗೆ ವಿದಾಯ ಹೇಳಿದ್ದಾರೆ. ಈ ಮೂಲಕ ನಾನು ನನ್ನ ಒಳ್ಳೆಯ ಸ್ನೇಹಿತೆಯೊಬ್ಬಳನ್ನು ಕಳೆದುಕೊಂಡಿದ್ದೇನೆ ಎಂದು ಚಿತ್ರಕಥೆಗಾರ, ನಟ ಅಭಿಷೇಕ್ ಗೌತಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net