More

    ಅಳಿಯನ ಕೊಲೆ ಮಾಡಿ ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​ ಪೊಲೀಸರ ಬಲೆಗೆ

    ವಿಜಯಪುರ: ಇದೇ ಫೆಬ್ರುವರಿ 14ರ ಪ್ರೇಮಿಗಳ ದಿನದಂದೇ ಅಳಿಯನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮಾಜಿ ಕಾರ್ಪೋರೇಟರ್​ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮಗಳು ಮದ್ವೆಯಾಗಿದ್ದಳು ಎನ್ನುವ ಕಾರಣಕ್ಕೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ರೌಫ್‌ ಶೇಖ್​ ತನ್ನ ಅಳಿಯ ಪಿಎಸ್​ಐ ಪುತ್ರ ಮುಸ್ತಕಿನ್ ಕೂಡಗಿ(28) ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಅರೆಸ್ಟ್​ ಮಾಡಲಾಗಿದೆ. ತಮ್ಮ ಮಗಳು 5 ತಿಂಗಳ ಗರ್ಭಿಣಿ ಎನ್ನುವುದನ್ನೂ ನೋಡದೇ ಅಪ್ಪ ಮಗಳ ಬಾಳಿಗೆ ಕೊಳ್ಳಿ ಇಟ್ಟಿರುವ ಹೃದಯವಿದ್ರಾವಕ ಘಟನೆ ಇದಾಗಿದೆ.

    ಮುಸ್ತಕಿನ್ ಕೂಡಗಿ ಅವರ ತಂದೆ ಗಾಂಧಿಚೌಕ್ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಪಿಎಸ್​ಎಸ್​ ರಿಯಾಜ್ ಅಹಮದ್​. ಇವರ ಸಂಬಂಧಿ, ರೌಫ್‌ ಶೇಖ್​ರ ಮಗಳು ಅತೀಕಾಳನ್ನು ಈತ ಪ್ರೀತಿಸುತ್ತಿದ್ದ. ಇಬ್ಬರೂ ಎರಡೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ತಂದೆ ಒಪ್ಪಿರಲಿಲ್ಲ. ವಿರೋಧದ ನಡುವೆಯೂ ಪ್ರೇಮಿಗಳಿಬ್ಬರೂ 6 ತಿಂಗಳ ಹಿಂದೆ ಮದ್ವೆಯಾಗಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಗರ್ಭಿಣಿಯಾದ ಪತ್ನಿಯನ್ನು ಇತ್ತೀಚಿಗೆ ಊರಿಗೆ ವಾಪಸ್​ ಕರೆದುಕೊಂಡು ಬಂದು ತನ್ನ ಮನೆಯಲ್ಲೇ ವಾಸವಿದ್ದ.

    ಫೆ.14ರಂದು ಹಾಡುಹಗಲೇ ವಿಜಯಪುರ ನಗರ ಹೊರವಲಯದ ರೇಡಿಯೋ ಕೇಂದ್ರದ ಬಳಿ ಸಿನಿಮೀಯ ರೀತಿಯಲ್ಲಿ ಮುಸ್ತಕಿನ್ ಕೂಡಗಿ ಅವರನ್ನ ದುಷ್ಕರ್ಮಿಗಳು ಕೊಂದಿದ್ದಾರೆ.

    ನಿರ್ಮಾಣ ಹಂತದ ಮನೆ ಬಳಿಗೆ ಬೈಕ್​ನಲ್ಲಿ ಮುಸ್ತಕಿನ್​ ಹೋಗುತ್ತಿದ್ದರು. ಈ ವೇಳೆ ಬೈಕ್​ಗೆ ಬುಲೆರೋ ವಾಹನ ಡಿಕ್ಕಿ ಹೊಡೆಸಿ, ಬಳಿಕ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರೀತಿಸಿ ಮದ್ವೆಯಾದ ಬಳಿಕ ಮುಸ್ತಕಿನ್​ನ ಕೊಲೆಗೆ ಹಲವು ಬಾರಿ ಯತ್ನ ನಡೆದಿತ್ತಂತೆ. ಮದ್ವೆಯಾದ ಹೊಸತರಲ್ಲಿ ವಿಡಿಯೋ ಮಾಡಿದ್ದ ಅತೀಕಾ, ನನ್ನ ತಂದೆ ಹಾಗೂ ಸಹೋದರರಿಂದ ನನ್ನ ಪ್ರಿಯಕರ ಮುಸ್ತಕೀನ್ ಮತ್ತು ಇವರ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ನನಗೂ, ಮುಸ್ತಕಿನ್​ ಮತ್ತು ನನ್ನ ಮಾವನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಅಳಲು ತೋಡಿಕೊಂಡಿದ್ದರು. ದಯವಿಟ್ಟು ನಮ್ಮನ್ನುಬದುಕಲು ಬಿಡಿ ಎಂದು ಅಪ್ಪನನ್ನ ಮಗಳು ಅತೀಕಾ ಬೇಡಿಕೊಂಡಿದ್ದಳು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಾಹನ ಹಾಯಿಸಿ ಬಳಿಕ ಯುವಕನನ್ನು ಸಂಬಂಧಿಕರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆರಂಭದಲ್ಲಿ ಇದೊಂದು ಅಪಘಾತ ಎಂದೇ ತಿಳಿಯಲಾಗಿತ್ತು. ಆದರೆ, ಕೂಲಂಕುಷವಾಗಿ ತನಿಖೆ ನಡೆಸಲಾಗಿ ಇದೊಂದು ಉದ್ದೇಶ ಪೂರ್ವ ಕೃತ್ಯ ಎಂಬುದು ಕಂಡುಬಂದಿದೆ.

    ‘ಗಂಗೂಬಾಯಿ ಕಾಥಿಯಾವಾಡಿ’ ರಿಲೀಸ್​ಗೆ ಸಿಕ್ತು ಗ್ರೀನ್​ ಸಿಗ್ನಲ್​: ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಗಳು ವಜಾ

    ಬಾಯಲ್ಲಿ ನೀರೂರಿಸುವ ತಿರುಪತಿ ಜಿಲೇಬಿ ಜೇಬಿಗೆ ಕಹಿ: 100 ರೂ ಬದ್ಲು ಇನ್ನು 500 ರೂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts