More

    ಬಾಯಲ್ಲಿ ನೀರೂರಿಸುವ ತಿರುಪತಿ ಜಿಲೇಬಿ ಜೇಬಿಗೆ ಕಹಿ: 100 ರೂ ಬದ್ಲು ಇನ್ನು 500 ರೂ!

    ತಿರುಪತಿ: ತಿರುಮಲ ತಿರುಪತಿ ದೇವಸ್ಥಾನವು ಜಿಲೇಬಿ ಪ್ರಸಾದದ ಬೆಲೆಯನ್ನು ಹೆಚ್ಚಿಸಿದೆ. 100 ರೂಪಾಯಿ ಇದ್ದ ಜಿಲೇಬಿ ಬೆಲೆ 500 ರೂಪಾಯಿಗೆ ಏರಿಕೆಯಾಗಿದೆ. ದೇವಸ್ಥಾನದಲ್ಲಿ ಮುಂದೆ ಬರಲಿರುವ ಆರ್ಜಿತ ಸೇವೆಯ ದಿನದಂದು ಈ ಪರಿಷ್ಕೃತ ಬೆಲೆ ಜಾರಿಗೆ ಬರಲಿದೆ.

    ಇದಕ್ಕೆ ಕಾರಣ, ಜಿಲೇಬಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು. 100 ರೂಪಾಯಿಗೆ ಖರೀದಿ ಮಾಡುವ ಪ್ರಸಾದವನ್ನು ಅತ್ಯಧಿಕ ಬೆಲೆಗೆ ದೇವಾಲಯದ ಹೊರಗಡೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯಲು ದೇವಸ್ಥಾನದಲ್ಲಿಯೇ ಐದು ಪಟ್ಟು ಹಣ ಹೆಚ್ಚು ಮಾಡಿರುವುದಾಗಿ ತಿರುಮಲ ತಿರುಪತಿ ಟ್ರಸ್ಟ್​ ಹೇಳಿದೆ.

    ಕಳೆದ ಜೂನ್ ನಲ್ಲಿ ಟಿಟಿಡಿ ಆಡಳಿತದ ಉನ್ನತಾಧಿಕಾರಿಗಳು ಟ್ರಸ್ಟ್ ಈ ಕುರಿತು ಚರ್ಚಿಸಿ ಇಂಥದ್ದೊಂದು ತೀರ್ಮಾನಕ್ಕೆ ಬಂದಿದೆ. 2 ಸಾವಿರ ರೂಪಾಯಿಗೆ ಜಿಲೇಬಿ ಮಾರಾಟದ ಬಗ್ಗೆ ಪ್ರಸ್ತಾಪ ಇರಿಸಲಾಗಿತ್ತು. ಆದರೆ ಅದನ್ನು 500 ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಟ್ರಸ್ಟ್​ ಹೇಳಿದೆ. ಅಂದಹಾಗೆ ಜಿಲೇಬಿ ಮತ್ತು ಥೆಂಥೋಲ ಸೆಟ್ ತಯಾರಿಸಲು ಟಿಟಿಡಿ ಮಾಡಿದ ವೆಚ್ಚ 147.50 ರೂಪಾಯಿ ಆಗಿದೆ.

    ಈ ಬೆಲೆ ಏರಿಕೆಯಿಂದಾಗಿ ಟಿಟಿಡಿ ಶೇ 239 ರಷ್ಟು ಹೆಚ್ಚುವರಿ ಲಾಭವನ್ನು ಪಡೆಯುತ್ತದೆ. ಬೆಲೆ ಏರಿಕೆಗೆ ಸಂಬಂಧಿಸಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಟಿಟಿಡಿ ಟ್ರಸ್ಟ್‌ನ ಮಾಜಿ ಸದಸ್ಯ ಜಿ ಭಾನುಪ್ರಕಾಶ್ ರೆಡ್ಡಿ, ದೇವಸ್ಥಾನವು ಭಕ್ತರಿಗೆ ಸಬ್ಸಿಡಿ ದರದಲ್ಲಿ ಪ್ರಸಾದವನ್ನು ಯಾವಾಗಲೂ ನೀಡಬೇಕು. ಅದನ್ನು ಬಿಟ್ಟು ಈ ಪರಿಯಲ್ಲಿ ದರ ಏರಿಸಿರುವುದು ಸರಿಯಲ್ಲ. ಇದರಿಂದ ಭಕ್ತರಿಗೆ ಭಾರಿ ಹೊರೆಯಾಗಲಿದೆ. ಕಾಳಸಂತೆಯಲ್ಲಿ ಹೆಚ್ಚುವರಿ ಬೆಲೆಗೆ ಮಾರಾಟ ಆಗುತ್ತಿದೆ ಎನ್ನುವ ಕಾರಣಕ್ಕೆ ಭಕ್ತರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.

    ಇದೇ ವೇಳೆ ಭಕ್ತರಿಗೆ ಖುಷಿಯ ಸುದ್ದಿಯನ್ನೂ ಟಿಟಿಡಿ ನೀಡಿದೆ. ಅದೇನೆಂದರೆ ನಾಳೆ (ಫೆ.23) ಗುರುವಾರ ವಿಶೇಷ ಪ್ರಸಾದವನ್ನು ತೆರೆದ ಕೌಂಟರ್‌ಗಳಿಂದ ಭಕ್ತರಿಗೆ ವಿತರಿಸಲಾಗುತ್ತದೆ. ಹೆಚ್ಚು ಹೆಚ್ಚು ಪ್ರಸಾದ ನೀಡುವ ಸಂಬಂಧ ತಿರುಮಲ ದೇವಾಲಯದ ಒಳಗಿನ ಪಾಡಿ ಪೋಟುನಿಂದ ದೇವಾಲಯದ ಹೊರಗೆ ಹೊಸದಾಗಿ ನಿರ್ಮಿಸಲಾದ ಬೂಂದಿ ಕಿಚನ್​​ನಲ್ಲಿ ಪ್ರಸಾದ ತಯಾರಿಕೆಯನ್ನು ಸ್ಥಳಾಂತರ ಮಾಡಲಾಗಿದೆ.

    ಈ ವರ್ಷವೂ ಪರೀಕ್ಷೆ ಬೇಡ ಎಂದು ‘ಸುಪ್ರೀಂ’ ಮೊರೆ ಹೋದ ವಿದ್ಯಾರ್ಥಿಗಳು: ಅರ್ಜಿ ವಜಾ ಮಾಡಿದ ಕೋರ್ಟ್

    ಅಂದು ಗೋಕುಲ್​, ಇಂದು ಹರ್ಷ: ಹತ್ಯೆಗೆ ಜೈಲಿನಿಂದಲೇ ಸ್ಕೆಚ್​ ಹಾಕಿದ್ರಾ? ಇವನದ್ದಾ ಮಾಸ್ಟರ್​ಮೈಂಡ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts