VIDEO: ಪೊಲೀಸ್‌ ಇಲಾಖೆಯ ಭ್ರಷ್ಟಾಚಾರ ಮತ್ತೆ ಸಾಬೀತು! ಕಂತೆ ಕಂತೆ ಲಂಚದ ನೋಟು ಎಣಿಸುತ್ತಿರೋ ಭಾಲ್ಕಿಯ ಸಿಪಿಐ

lancha
Published on

ಬೀದರ್‌: ರಾಜ್ಯದಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಲಂಚಕ್ಕೆ ಕೈಯೊಡ್ಡಿ ಇಲಾಖೆಗೆ ಕಪ್ಪು ಚುಕ್ಕೆ ತರುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿರುವ ಬೆನ್ನಲ್ಲೇ ಗಡಿ ಜಿಲ್ಲೆ ಬೀದರಿನಲ್ಲಿ ಇದಕ್ಕೆ ಪುಷ್ಟಿ ನೀಡುವಂಥ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗೊತ್ತಾಗುತ್ತಿದೆ.

ಗಡಿ ಜಿಲ್ಲೆ ಬೀದರ್ ನ ಭಾಲ್ಕಿಯಲ್ಲಿ ಸಿಪಿಐ ಟಿ.ಆರ್. ರಾಘವೇಂದ್ರ ಅವರು ಕಂತೆ ಕಂತೆ ಹಣವನ್ನು ಲಂಚದ ರೂಪದಲ್ಲಿ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಒಂದು ವರ್ಷದಿಂದ ಭಾಲ್ಕಿ ನಗರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿ.ಆರ್. ರಾಘವೇಂದ್ರ ಅವರು ಭಾಲ್ಕಿ ಪಟ್ಟಣದ ಕ್ರೂಸರ್ ವಾಹನದ ಮಾಲೀಕರಿಂದ ಲಂಚ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಜನರ ಜೀವ ಮತ್ತು ಆಸ್ತಿ ರಕ್ಷಣೆ ಹೊಣೆ ಹೊತ್ತ ಪೊಲೀಸ್ ಇಲಾಖೆ ಮೇಲೆ ಪ್ರಶ್ನೆ ಚಿಹ್ನೆ ಮೂಡಿಸಿದೆ.

ಸಿಪಿಐ ಆ ವ್ಯಕ್ತಿ ಯಿಂದ ಯಾಕೆ ಲಂಚ ಪಡೆಯುತ್ತಿದ್ದಾರೆ ?, ಆ ವ್ಯಕ್ತಿ ಯಾರು ಎಂಬುವದರ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸುವ ಮೂಲಕ ಸತ್ಯಾಸತ್ಯತೆ ಏನೂ ಎಂಬುದು ಪತ್ತೆ ಹಚ್ಚಬೇಕಾಗಿದೆ. ಸಿಪಿಐ ಟಿ.ಆರ್ ರಾಘವೇಂದ್ರ ಅವರು ಭಾಲ್ಕಿ ನಗರದಲ್ಲಿ ಸಾಕಷ್ಟು ಲಂಚ ವಸೂಲಿ ಮಾಡುತ್ತಿದ್ದಾರೆ ಈ ಬಗ್ಗೆ ಪ್ರಕರಣ ದಾಖಲಿಸಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಿಪಿಐ ಮೇಲೆ ಕ್ರಮಕ್ಕೆ ಸ್ಥಳೀಯ ಶಾಸಕರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೂಡಾ ಒತ್ತಾಯಿಸಿದ್ದಾರೆ (ದಿಗ್ವಿಜಯ ನ್ಯೂಸ್‌)

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net