ಕಾಂಗ್ರೆಸ್‌ಗೆ ಅಧ್ಯಕ್ಷರಿಲ್ಲದಿದ್ದರೆ ಆಕಾಶವೇನೂ ಕಳಚಿ ಬೀಳಲ್ಲ- ಸಲ್ಮಾನ್‌ ಖುರ್ಷೀದ್‌ ಹೇಳಿಕೆ

khurshid
Published on

ನವದೆಹಲಿ: ಕಾಂಗ್ರೆಸ್‌ಗೆ ಅಧ್ಯಕ್ಷರಾಗಿ ಸೋನಿಯಾಗಾಂಧಿ ಪಕ್ಷ ಮುನ್ನಡೆಸುತ್ತಿದ್ದಾರೆ. ಪಕ್ಷಕ್ಕೆ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಬೇಕು ಎಂಬ ಅವಸರವೇನಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಸಲ್ಮಾನ್‌ ಖುರ್ಷೀದ್‌ ಹೇಳಿದ್ದಾರೆ.

ಚುನಾಯಿತ ಅಧ್ಯಕ್ಷರು ಇಲ್ಲದಿದ್ದರೆ ಆಕಾಶವೇನೂ ಕಳಚಿಬೀಳುವುದಿಲ್ಲ. ಅಧ್ಯಕ್ಷ ಸ್ಥಾನದ ಕುರಿತು ಸೋನಿಯಾ ಗಾಂಧಿ ಅವರೇ ತೀರ್ಮಾನಿಸಲಿದ್ದಾರೆ ಎಂದು ಖುರ್ಷೀದ್‌ ಹೇಳಿದ್ದಾರೆ.

‘ಪಕ್ಷದ ನಾಯಕತ್ವದಲ್ಲಿ ಆಮೂಲಾಗ್ರ ಬದಲಾವಣೆ ಬಯಸಿ ಕೆಲವರು ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಒಂದು ವೇಳೆ ಈ ಮುಖಂಡರು ಒಂದು ಅದಕ್ಕೂ ಮುನ್ನವೇ ನನ್ನನ್ನು ಭೇಟಿ ಮಾಡಿದ್ದರೆ ನಾನು ಖಂಡಿತವಾಗಿಯೂ ಅದಕ್ಕೆ ಸಹಿ ಹಾಕುತ್ತಿರಲಿಲ್ಲ ಎಂದಿದ್ದಾರೆ.

ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ಮುಖಂಡರು ಸುಲಭವಾಗಿ ಅವರೊಂದಿಗೆ ಮಾತನಾಡುವ ಅವಕಾಶ ಹೊಂದಿದ್ದರು. ಈ ರೀತಿ ಪತ್ರ ಬರೆಯುವ ಬದಲು, ಖುದ್ದಾಗಿ ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಬಹುದಿತ್ತು ಎಂದರು.

ಪಕ್ಷದ ಅಧ್ಯಕ್ಷ ಸ್ಥಾನದ ಕುರಿತಂತೆ ಮಾಧ್ಯಮಗಳ ಎದುರು ಖುರ್ಷೀದ್‌ ಈ ವಿಷಯ ತಿಳಿಸಿದರು. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದಿನ ವರ್ಷಗಳಲ್ಲಿ ಚುನಾವಣೆಗಳೇನು ನಡೆದಿರಲಿಲ್ಲ. ಆದರೂ ಪಕ್ಷ ಅಧಿಕಾರದಲ್ಲಿ ಇತ್ತಲ್ಲವೆ ಎಂದು ಪ್ರಶ್ನಿಸಿರುವ ಖುರ್ಷೀದ್‌, ಅಧಿಕಾರ ಅನುಭವಿಸಿದವರ ಪೈಕಿ ಗುಲಾಂ ನಬಿ ಆಜಾದ್‌ ಅವರೂ ಒಬ್ಬರಾಗಿದ್ದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net