More

    VIDEO: ಬೆಳ್ಳಂಬೆಳಗ್ಗೆ ಜನರನ್ನು ಬೇಸ್ತುಬೀಳಿಸಿದ ಕಾಂಡೋಮ್‌- ತುಮಕೂರು ಹೆದ್ದಾರಿಯಲ್ಲಿ ರಾಶಿ ರಾಶಿ…

    ತುಮಕೂರು: ಕೆಲವು ನಿರ್ಜನ ಪ್ರದೇಶ, ನಿರ್ಮಾಣ ಹಂತದಲ್ಲಿರುವ ಕಟ್ಟಗಳು, ಜನವಸತಿ ಇಲ್ಲದ ಪ್ರದೇಶಗಳು ಸೇರಿದಂತೆ ಹಲವು ಜಾಗಗಳು ಅಕ್ರಮಗಳ ತಾಣವಾಗುತ್ತಿವೆ. ಪ್ರೇಮಿಗಳು ಇಂಥ ಜಾಗವನ್ನು ಹುಡುಕಿ ಹೋದರೆ, ಕುಡುಕರು, ಪಾರ್ಟಿ ಮಾಡುವವರು, ಅಪರಾಧಿಕ ಕೃತ್ಯ ನಡೆಸುವವರಿಗೂ ಇಂಥ ಸ್ಥಳಗಳೇ ಬೇಕು. ಆದ್ದರಿಂದ ಮದ್ಯದ ಬಾಟಲಿಗಳ ಜತೆಯಲ್ಲಿ ಕಾಂಡೋಮ್‌ಗಳು ಇಂಥ ಪ್ರದೇಶಗಳಲ್ಲಿ ಪತ್ತೆಯಾಗುವುದು ಮಾಮೂಲಿಯಾಗಿವೆ.

    ಆದರೆ ಇದೀಗ ತುಮಕೂರು ಜನತೆಯನ್ನು ಬೆಚ್ಚಿಬೀಳಿಸಿರುವ ಘಟನೆ ನಡೆದಿದೆ. ಅದೇನೆಂದರೆ ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಕಾಂಡೋಮ್‌ಗಳು ಪತ್ತೆಯಾಗಿದ್ದು, ಜನರನ್ನು ತಲ್ಲಣಗೊಳಿಸಿದೆ.

    ನಿನ್ನೆ ಮಧ್ಯರಾತ್ರಿಯಿಂದ ಇಂದು ನಸುಕಿನ ಅವಧಿಯ ಮಧ್ಯೆ ಇದನ್ನು ಯಾರೋ ತಂದು ಸುರುವಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರ ಕ್ಯಾತ್ಸಂದ್ರ-ಬಟವಾಡಿ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ ಇವು ಕಂಡುಬಂದಿವೆ.

    ಕಿಲೋಮೀಟರ್‌ಗಟ್ಟಲೆ ಈ ಕಾಂಡೋಮ್‌ಗಳು ಬೇಕಂತಲೇ ಯಾರೋ ಬಂದು ಎಸೆದು ಹೋಗಿದ್ದಾರಾ ಅಥವಾ ಕಂಪನಿಗಳ ವತಿಯಿಂದ ಸಾಗಣೆ ಮಾಡುವಾಗ ವಾಹನಗಳಿಂದ ಅಚಾನಕ್ಕಾಗಿ ಬಿದ್ದುಹೋಗಿವೆಯೋ ಎಂಬುದು ಸ್ಪಷ್ಟವಾಗಿಲ್ಲವಾದರೂ ಇದನ್ನು ನೋಡಿದರೆ ಯಾರೋ ಎಸೆದು ಹೋಗಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿದ ಬಳಿಕ ವಿವರ ತಿಳಿಯಬೇಕಿದೆ.

    ಇಲ್ಲಿದೆ ಅದರ ವಿಡಿಯೋ:

    ಮೈ, ಬಟ್ಟೆ ಸುಡಲಿವೆ ಸೋಪ್‌, ಡಿಟರ್ಜೆಂಟ್‌: ಬೆಲೆ ಏರಿಸಿದ ಹಿಂದೂಸ್ತಾನ್‌ ಯುನಿಲಿವರ್‌- ಗ್ರಾಹಕರಿಗೆ ಬರೆ

    ಬ್ರಾಹ್ಮಣರನ್ನು ಬಹಿಷ್ಕರಿಸಿ ಎಂದ ಸಿಎಂ ತಂದೆ ಅರೆಸ್ಟ್‌: ಅಪ್ಪನನ್ನು ಬಂಧಿಸಿದ್ದು ಸರಿ ಎಂದ ಮಗ!

    VIDEO: ಮೊಟ್ಟೆಯ ಬದಲು ಊಸರವಳ್ಳಿಗೆ ಹುಟ್ಟಿತು ಮರಿ- ಕುತೂಹಲದ ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts