ದೂರು ತಗೋಳಿ ಎಂದ್ರೆ 'ಬಳಿಗೆ ಬಾರೆ' ಅಂತಿದ್ದ ಹಾವೇರಿ ಪೊಲೀಸ್‌! ವಿಡಿಯೋಕಾಲ್‌ನಲ್ಲಿ ಕೈ, ಕಣ್‌ಸನ್ನೆ ಮಾಡಿ ಸಿಕ್ಕಿಬಿದ್ದ

chidananda
Published on

ಹಾವೇರಿ: ದೂರು ಕೊಡೊಕೆ ಬಂದ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಹಾವೇರಿ ಮಹಿಳಾ ಠಾಣೆಯ ಸಿಪಿಐ ಚಿದಾನಂದ ಅವರನ್ನು ಅಮಾನತುಗೊಳಿಸಲಾಗಿದೆ.

ಕೆಲ ವರ್ಷಗಳಿಂದಲೂ ಇವರ ಮೇಲೆ ಭಾರಿ ಆರೋಪ ಕೇಳಿಬರುತ್ತಿದ್ದವು. ಮಹಿಳೆಯರು ದೂರು ಕೊಡಲು ಬಂದರೆ ಸನ್ನೆ ಮಾಡಿ ಅವರನ್ನು ಕರೆಯುತ್ತಿದ್ದರು. ಮಾತ್ರವಲ್ಲದೇ ದೂರು ಕೊಡಲು ಬಂದ ಮಹಿಳೆಯರ ಮೊಬೈಲ್‌ ಸಂಖ್ಯೆಗಳನ್ನು ಪಡೆದು ಅವರಿಗೆ ವಿಡಿಯೋಕಾಲ‌್ ಮಾಡಿ ಅಶ್ಲೀಲವಾದ ಸನ್ನೆಗಳನ್ನು ಮಾಡುತ್ತ ಬಳಿಗೆ ಕರೆಯುತ್ತಿದ್ದ ಗಂಭೀರ ಆರೋಪಗಳು ಕೇಳಿಬರುತ್ತಿದ್ದವು.

2018ರಲ್ಲಿ ಕೂಡ ಇದೇ ರೀತಿ ಇವರ ವಿರುದ್ಧ ದೂರು ಕೇಳಿಬಂದಿದ್ದು, ಕೆಲವು ಮಹಿಳೆಯರು ಠಾಣೆಗೆ ಮುತ್ತಿಗೆ ಕೂಡ ಹಾಕಿದ್ದರು. ಮಹಿಳೆಯರು ಸೇರಿ ಥಳಿಸಿದ್ದರು ಕೂಡ. ಆದರೆ ಇದೀಗ ಇವರ ವರ್ತನೆ ಮಿತಿಮೀರಿದ್ದು, ಮಹಿಳೆಯರ ಜತೆ ಅಸಭ್ಯವಾಗಿ ನಡೆದುಕೊಳ್ಳಲು ಶುರು ಮಾಡಿದ್ದರು. ಕಂಪ್ಲೇಟ್ ಕೊಡಲು ಬಂದಾಗ ಅವರ ವೀಕ್‌ನೆಸ್‌ ಬಂಡವಾಳ ಮಾಡಿಕೊಳ್ಳುತ್ತ, ಈ ರೀತಿ ಅಸಭ್ಯವಾಗಿ ವರ್ತಿಸುತ್ತಿರುವುದಾಗಿ ಹಲವರು ದೂರಿದ್ದಾರೆ.

ವಿಡಿಯೋ ಕಾಲ್‌ ಮಾಡಿದಾಗ ಅವುಗಳ ದೃಶ್ಯಗಳನ್ನು ವೈರಲ್‌ ಮಾಡಲಾಗಿದೆ. ದಾವಣಗೆರೆ ಐಜಿಪಿಗೆ ಹಲವು ಮಹಿಳೆಯರು ದೂರು ನೀಡಿದ್ದಾರೆ. ವೈರಲ್ ವಿಡಿಯೋ ಹಾಗೂ ದೂರನ್ನು ಆಧರಿಸಿ ಕೊನೆಗೂ ಇವರನ್ನು ಅಮಾನತುಗೊಳಿಸಲಾಗಿದೆ. (ದಿಗ್ವಿಜಯ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net