ಮದ್ವೆ ಮಾಡಿಕೊಳ್ಳೋ ನೆಪದಲ್ಲಿ ಕೊಪ್ಪಳದ ಪಿಎಸ್‌ಐ ಮಹಾಮೋಸ? ಆರೋಪ ಕೇಳಿಬರ್ತಿದ್ದಂತೆಯೇ ಎಸ್ಕೇಪ್‌!

muttappa
Published on

ಕೊಪ್ಪಳ: ಜನರನ್ನು ರಕ್ಷಿಸಬೇಕಾದ ಪೊಲೀಸರೇ ಭಕ್ಷಕರಾದರೆ ಹೇಗಿರುತ್ತೆ? ಅಂಥದ್ದೇ ಒಂದು ಘಟನೆ ಕೊಪ್ಪಳದಲ್ಲಿ ನಡೆದಿದೆ. ಮದುವೆ ಮಾಡಿಕೊಳ್ಳುವ ನೆಪದಲ್ಲಿ ಕೆಲ ಮಹಿಳೆಯರನ್ನು ವಂಚಿಸಿರುವ ಆರೋಪವೀಗ ಫಿಂಗರ್ ಪ್ರಿಂಟ್ ವಿಭಾಗದ ಪಿಎಸ್ಐ ಮುತ್ತಪ್ಪ ಬಡಿಗೇರ ಅವರ ಮೇಲೆ ಬಂದಿದೆ.

ಮದುವೆ ಮಾಡಿಕೊಳ್ಳುವುದಾಗಿ ತಮಗೆ ಇವರು ಮೋಸ ಮಾಡಿರುವುದಾಗಿ ಕೆಲವು ಮಹಿಳೆಯರು ಮುತ್ತಪ್ಪ ವಿರುದ್ಧ ಮೌಖಿಕವಾಗಿ ದೂರು ದಾಖಲು ಮಾಡಿದ್ದಾರೆ.

ವಧು ನೋಡುವ ನೆಪದಲ್ಲಿ ಇವರು ತಮ್ಮನ್ನು ಯಾಮಾರಿಸಿದ್ದಾರೆ. ಮದುವೆಯ ಮಾಡಿಕೊಳ್ಳುವುದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ನಾಲ್ಕೈದು ಮಹಿಳೆಯರು ಆರೋಪಿಸಿದ್ದಾರೆ. ಕೊಪ್ಪಳ ಎಸ್ಪಿ ಕಚೇರಿ ಆಗಮಿಸಿರುವ ಮಹಿಳೆಯರು ತಮಗೆ ನ್ಯಾಯ ಕೊಡಿಸಿ ಎಂದು ಕೋರಿಕೊಂಡಿದ್ದಾರೆ.

ಮಹಿಳೆಯೊಬ್ಬರ ಕುಟುಂಬದಿಂದ ಕೊಪ್ಪಳ ಎಸ್ಪಿ ಅವರಿಗೆ ಮೌಖಿಕ ದೂರು ದಾಖಲಾಗಿದೆ. ಅವರ ಮನವೋಲಿಸಿ ಊರಿಗೆ ವಾಪಸ್‌ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ತಮ್ಮ ವಿರುದ್ಧ ಮಹಿಳೆಯರು ಆರೋಪಿಸುತ್ತಿದ್ದಂತೆಯೇ ಮುತ್ತಣ್ಣ ಬಡಿಗೇರ್ ಎಸ್ಕೇಪ್‌ ಆಗಿದ್ದು, ಅವರ ವಿರುದ್ಧ ಇನ್ನಷ್ಟು ಸಂದೇಹ ಬಲವಾಗಿದೆ. ಈ ಕುರಿತು ಕೊಪ್ಪಳ ಎಸ್ಪಿ ಟಿ.ಶ್ರೀಧರ ಅವರು ಫಿಂಗರ್ ಪ್ರಿಂಟ್ ವಿಭಾಗದ ಎಡಿಜಿಯವರಿಗೆ ಪತ್ರ ಬರೆದಿದ್ದಾರೆ. ಸದ್ಯ ಯಾವುದೇ ಲಿಖಿತ ದೂರು ಬರಲಿಲ್ಲ. ದೂರು ಬಂದರೆ, ಕಾನೂನುಬದ್ಧವಾಗಿ ಕ್ರಮ ಜರುಗಿಸುವುದಾಗಿ ಶ್ರೀಧರ್‌ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net