

ಬೆಂಗಳೂರು : ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 3,006 ಕಮ್ಯುನಿಟಿ ಹೆಲ್ತ್ ಆಫೀಸರ್ ಹುದ್ದೆಗಳಿಗೆ ಬಿಎಸ್ ನರ್ಸಿಂಗ್ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 18 ಕೊನೆಯ ದಿನವಾಗಿದೆ.
ವಿದ್ಯಾರ್ಹತೆ: ಬಿಎಸ್‌ಸಿ ನರ್ಸಿಂಗ್ ಪದವೀಧರರು, ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ವೇತನ ಶ್ರೇಣಿ: ರೂ.24,200 ಪ್ರತಿ ತಿಂಗಳು. ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಹಣ ರೂ.8,000
ಜಿಲ್ಲಾವಾರು ಖಾಲಿ ಇರುವ ಹುದ್ದೆಗಳು ಹೀಗಿವೆ:
ಬೆಳಗಾವಿ - 476
ತುಮಕೂರು - 404
ಮೈಸೂರು - 327
ದಕ್ಷಿಣ ಕನ್ನಡ - 323
ಮಂಡ್ಯ - 267
ಉಡುಪಿ - 249
ಚಿಕ್ಕಬಳ್ಳಾಪುರ - 161
ಕೊಡಗು - 160
ದಾವಣಗೆರೆ - 147
ಬೆಂಗಳೂರು ಗ್ರಾಮಾಂತರ - 142
ಧಾರವಾಡ - 122
ಬೆಂಗಳೂರು ನಗರ - 81
ಉತ್ತರ ಕನ್ನಡ - 37
ವಿಜಯಪುರ - 17
ಬಾಗಲಕೋಟೆ - 17
ಬಳ್ಳಾರಿ - 11
ಚಿಕ್ಕಮಗಳೂರು, ಕೊಪ್ಪಳ ಹಾಗೂ ರಾಯಚೂರು - ತಲಾ 12
ಕಲಬುರ್ಗಿ - 08
ಕೋಲಾರ - 09
ಯಾದಗಿರಿ - 04
ಮೈಸೂರು ( ಹಳೆಯ ಬಾಕಿ ಹುದ್ದೆ ) - 03
ಬೀದರ್ - 04
ಹಾವೇರಿ - 01
ಒಟ್ಟು ಹುದ್ದೆಗಳ ಸಂಖ್ಯೆ - 3006
ದಿನಾಂಕಗಳು
* ಅರ್ಜಿಗಳ ಪರಿಶೀಲನೆ ಕಾರ್ಯ ಅಕ್ಟೋಬರ್ 18 ರಿಂದ 22ರವರೆಗೆ ನಡೆಯಲಿದೆ.
* ಅಕ್ಟೋಬರ್ 23ರಂದು ಆನ್ ಲೈನ್ ಪರೀಕ್ಷೆ ನಡೆಯಲಿದೆ.
* ಜಿಲ್ಲಾವಾರು ಪರೀಕ್ಷೆಯಲ್ಲಿ ಆಯ್ಕೆಯಾದಂತ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ದಿನಾಂಕ ಅ.25ರಂದು ಬಿಡುಗಡೆ ಮಾಡಲಾಗುವುದು.
* ಅ. 26 ರಿಂದ 28ರವರೆಗೆ ದಾಖಲೆಗಳ ಪಶೀಲನೆ ನಡೆಯಲಿದೆ.
* ನವೆಂಬರ್ 4ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಗೊಳ್ಳಲಿದೆ.
ಅರ್ಹತೆ: ಜನರಲ್ ಕ್ಯಾಟಗರಿ- 35 ವರ್ಷ ಮೀರಿರಬಾರದು. ಎಸ್‌ಸಿ,ಎಸ್‌ಟಿ, ಮಾಜಿ ಸೇನಾ ಸಿಬ್ಬಂದಿ, ಅಂಗವಿಕಲರಿಗೆ 40 ವರ್ಷಗಳ ವರೆಗೆ ಅವಕಾಶವಿದೆ.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಭರ್ತಿಗೆ ಇಲ್ಲಿ ಕ್ಲಿಕ್ಕಿಸಿ: